ಚಿಕ್ಕೋಡಿ: ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನಪ್ಪಿದ ಘಟನೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಚನ್ನಬಸು ರುದ್ರಪ್ಪ ಚಾಜಗೌಡ(೫೦) ಮೃತ ದುರ್ಧೈವಿ. ಬೆಳಿಗ್ಗೆಯಿಂದ ಬಿಸಿಲಿನ ತಾಪಮಾನ ಹೆಚ್ಚಿತ್ತು. ಸಂಜೆ ಹೊತ್ತಿಗೆ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಚನ್ನಬಸು ಹೊಲದಲ್ಲಿ ಕಾರ್ಯ ನಿರ್ವಹಿಸುವಾಗ ಈ ಘಟನೆ ನಡೆದಿದೆ.
ಈತನಿಗೆ ಪತ್ನಿ, ನಾಲ್ಕು ಹೆಣ್ಣು ಹಾಗೂ ಓರ್ವ ಗಂಡು ಮಕ್ಕಳು ಇದ್ದಾರೆ. ಇನ್ನೂ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.