ಕರ್ನಾಟಕಕ್ಕೆ ಕೊಂಚ ಕೊರೋನಾ ರಿಲೀಫ್: ಕಳೆದ 24 ಗಂಟೆಯಲ್ಲಿ 2 ಸಾವು, ಕೇವಲ 6 ಹೊಸ ಪ್ರಕರಣ ಮಾತ್ರ ಪತ್ತೆ!
ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಕೇವಲ 6 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು: ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಕೇವಲ 6 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50 ವರ್ಷದ ಪುರುಷ ಹಾಗೂ ಬೆಂಗಳೂರಿನಲ್ಲಿ 65 ವರ್ಷದ ಮಹಿಳೆ ಮೃತಪಟ್ಟಿದ್ದು ಇದರೊಂದಿಗೆ ಸಾವಿನ ಸಂಖ್ಯೆ 16ಕ್ಕೇರಿದೆ. ಇನ್ನು 6 ಪ್ರಕರಣಗಳು ಮಾತ್ರ ಹೊಸದಾಗಿ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 390ಕ್ಕೇ ಏರಿಕೆಯಾಗಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನಂಪ್ರತಿ 20ಕ್ಕೂ ಮೇಲ್ಪಟ್ಟಿತ್ತು. ಆದರೆ ಇಂದು ಕೇವಲ 6 ಪ್ರಕರಣಗಳು ಮಾತ್ರ ವರದಿಯಾಗಿದ್ದು ರಾಜ್ಯದಲ್ಲಿ ಕೊರೋನಾದಿಂದ ಕೊಂಚ ರಿಲೀಫ್ ಸಿಕ್ಕಿದೆ.
ಇಲ್ಲಿಯವರೆಗೂ ಕೊರೋನಾ ಸೋಂಕಿನಿಂದ 111 ಜನರು ಗುಣಮುಖರಾಗಿದ್ದಾರೆ.