ರಸ್ತೆ ಮೇಲೆ ಎಸೆದಿರುವ ನೋಟುಗಳು 
ರಾಜ್ಯ

ರಸ್ತೆಯಲ್ಲಿ ನೂರರ ಗರಿಗರಿ ನೋಟು: ಕೊರೋನಾ ವೈರಸ್ ಭೀತಿಯಿಂದ ಬೆಚ್ಚಿ ಬಿದ್ದ ಗಂಗಾವತಿ ಜನ

ಗಂಗಾವತಿಯ ಜಯನಗರದ ಮೊದಲ ಹಂತದ ಎರಡನೇ ತಿರುವಿನಲ್ಲಿ ಬೆಳಂಬೆಳಗ್ಗೆ ರಸ್ತೆಯಲ್ಲಿ ನೂರರ ಗರಿಗರಿ ನೋಟುಗಳನ್ನು ಕಂಡು ಜನ ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಗಂಗಾವತಿ: ಇಲ್ಲಿನ ಜಯನಗರದ ಮೊದಲ ಹಂತದ ಎರಡನೇ ತಿರುವಿನಲ್ಲಿ ಬೆಳಂಬೆಳಗ್ಗೆ ರಸ್ತೆಯಲ್ಲಿ ನೂರರ ಗರಿಗರಿ ನೋಟುಗಳನ್ನು ಕಂಡು ಜನ ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಹಾಸ್ಯ ಸಾಹಿತಿ ಬೀಚಿ ಬಿ. ಪ್ರಾಣೇಶ ಅವರ ನಿವಾಸ ಸಮೀಪ ಇರುವ ಉದ್ಯಮಿ ಗುಪ್ತ ಎಂಬುವವರ ಮನೆ ಸಮೀಪ ಈ ಘಟನೆ  ನಡೆದಿದ್ದು, ಅಪರಿಚಿತರು ನೂರು ರೂಪಾಯಿ ಮುಖ ಬೆಲೆಯ ಒಟ್ಟು ಐದು ನೋಟುಗಳನ್ನು ಎಸೆದು ಹೋಗಿದ್ದಾರೆ.

ನೂರರ ನೋಟು ಕಂಡ ಜನ ಭಯಭೀತರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ನಗರ ಠಾಣೆಯ ಪಿಎಸ್ಐ ವೆಂಕಟಸ್ವಾಮಿ ಪರಿಶೀಲನೆ ನಡೆಸಿದರು.

ಕೊರೋನಾದಂತ ವಿಪತ್ತಿನ ಸಂದರ್ಭದಲ್ಲಿ ಅಪರಿಚಿತರ ಇಂತಹ ಕೃತ್ಯಗಳಿಂದ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಪೊಲೀಸರು ನೋಟುಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡರು.

ವರದಿ: ಶ್ರೀನಿವಾಸ .ಎಂ.ಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ ಗಳು!

ಎಲ್.ಕೆ. ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!

ವಾರಣಾಸಿ ಎನ್‌ಕೌಂಟರ್‌ನಲ್ಲಿ 30 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!

ರಷ್ಯಾ ಸಂಸತ್ ಚುನಾವಣೆ ಮಧ್ಯೆ ಮಾಸ್ಕೋ ಮೇಲೆ ಉಕ್ರೇನ್‌ನಿಂದ ಭೀಕರ ದಾಳಿ: 1,000ಕ್ಕೂ ಹೆಚ್ಚು ಡ್ರೋನ್‌ಗಳಿಂದ ದಾಳಿ!