ರಾಜ್ಯ

ಪಾಲಿಕೆಗೆ ಫೋನ್ ಮಾಡಿದರೆ ಮನೆ ಬಾಗಿಲಿಗೇ ಬರಲಿದೆ ಅಗತ್ಯ ವಸ್ತುಗಳು!

Manjula VN

ದಿನಸಿ, ತರಕಾರಿ, ಔಷಧ ಹೋಮ್ ಡೆಲಿವರಿ: ಸಹಾಯವಾಣಿ 080-61914960 ಕರೆ ಮಾಡಿ ಸೇವೆ ಪಡೆಯಿರಿ


ಬೆಂಗಳೂರು: ಲಾಕ್'ಡೌನ್ ನಿಂದಾಗಿ ಅಗತ್ಯ ವಸ್ತುಗಳು ಸಿಗದೇ ತೊಂದರೆಯಲ್ಲಿರುವ ನಗರದ ಜನತೆಗೆ ಮನೆಗೆ ವಸ್ತುಗಳನ್ನು ಪೂರೈಸುವ ಸಹಾಯವಾಣಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರಂಭಿಸಿದೆ. 

ಜದನರು ಮನೆಯಿಂದಲೇ ಹೋಂ ಡೆಲಿವರಿ ಸಹಾಯವಾಣಿ 080-61914960ಗೆ ಕರೆ ಮಾಡಿದರೆ, ದಿನಸಿ, ತರಕಾರಿ, ಔಷಧಿ ಮುಂತಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ರೂ.10 ಸೇವಾ ಶಲ್ಕ ಪಡೆಯಲಾಗುತ್ತದೆ. ಖಾಸಗಿ ಏಜೆನ್ಸಿಯ ಸಹಯೋಗದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ 5 ಸಾವಿರ ಜನರನ್ನು ಬಳಸಿಕೊಳ್ಲಲಾಗುತ್ತಿದೆ. ಈ ಸೇವೆಯನ್ನು ಒದಗಿಸಲು 18 ಸಾವಿರ ವರ್ತಕರ ಜೊತೆಗೆ ಮಾತುಕತೆ ನಡೆಸಿ ನೋಂದಾಯಿಸಿಕೊಳ್ಳಲಾಗಿದೆ. 

ಪಾಲಿಕ ಆರಂಭಿಸಿರುವ ನೂತನ ಸೇವೆಗೆ ಮುಖ್ಯಂತ್ರಿ ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಚಾಲನೆ  ನೀಡಿದರು. 

ನಗರದ ಜನತೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಬಿಬಿಎಂಪಿ ಆರಂಭಿಸಿರುವ ಹೋಂ ಡೆಲಿವರಿ ಸಹಾಯವಾಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

SCROLL FOR NEXT