ರಾಜ್ಯ

ಲಾಕ್ ಡೌನ್ ಹಿನ್ನೆಲೆ: ಮುಂಬಯಿಗೆ ಶಿವಮೊಗ್ಗ ಮಾವಿನ ಹಣ್ಣು ರವಾನೆ

Shilpa D

ಶಿವಮೊಗ್ಗ: ಕೊರೋನಾ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶಿವಮೊಗ್ಗ ಜಿಲ್ಲೆಯ ಸೊರಬ ಮತ್ತು ಅನವಟ್ಟಿ ರೈತರು ತಾವು ಬೆಳೆದ ಮಾವಿನ ಹಣ್ಣುಗಳನ್ನು ಮುಂಬಯಿಗೆ ರವಾನಿಸುತ್ತಿದ್ದಾರೆ.

ರೈತರು ತಮಗೆ ದೊರೆತ ಬೆಲೆಯಲ್ಲಿ ಸಂತೋಷವಾಗಿದ್ದು ಮುಂಬರುವ ದಿನಗಳಲ್ಲೂ ಉಳಿದ ಉತ್ಪನ್ನಗಳನ್ನು ಮುಂಬಯಿಯಲ್ಲೇ ಮಾರಾಟ ಮಾಡುವ ಭರವಸೆ  ವ್ಯಕ್ತ ಪಡಿಸಿದ್ದಾರೆ.

ಆಲ್ಫಾನ್ಸೋ, ರಸಪೂರಿ, ಮಲಿಕಾ, ನೀಲಂ ಬಗೆ ಹಣ್ಣುಗಳನ್ನು ಸೊರಬ, ಶಿವಮೊಗ್ಗ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಸುಮಾರು 2,500 ಹೆಕ್ಟೇರ್ ಗಳಲ್ಲಿ ಮಾವು ಬೆಳೆದಿದ್ದಾರೆ.

ಮಾವಿನ ಹಣ್ಣು ನಿಧಾನವಾಗಿ ಮಾರುಕಟ್ಟೆಗೆ ಪ್ರವೇಶಿಸಲಿದ್ದು,ಈ ವರ್ಷ 5ರಿಂದ 6 ಸಾವಿರ ಟನ್ ಮಾವು ಬೆಳೆ ಬರಲಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಮಾವು ಬೆಳೆಗಾರರು ಉತ್ತರ ಕರ್ನಾಟಕ ಮತ್ತು ಮುಂಬಯಿ ಮಾರುಕಟ್ಟೆ ಅವಲಂಬಿಸಿದ್ದು ಇಲ್ಲಿನ ಆಹಾರ ಉತ್ಪಾದನಾ ಘಟಕಗಳಿಗೆ ಪೂರೈಸುತ್ತಾರೆ.
 

SCROLL FOR NEXT