ರಾಜ್ಯ

ರಾಜ್ಯದಲ್ಲಿ ನಾಲ್ಕು ತಿಂಗಳ ಮಗು ಸೇರಿ 7 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 425ಕ್ಕೆ ಏರಿಕೆ

Raghavendra Adiga

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ 7 ಹೊಸ ಪ್ರಕರಣಗಳು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 425ಕ್ಕೆ ಏರಿಕೆ ಕಂಡಿದೆ.

ಈ ಕುರಿತು ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 7 ಹೊಸ #ಕೋವಿಡ್‌19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 425ಕ್ಕೆ ಏರಿದೆ. #ಮನೆಯಲ್ಲೇ ಇರಿ ಎಂದು ಸಚಿವರು ಜನತೆಯಲ್ಲಿ ಮನವಿ ಮಾಡಿದ್ದಾರೆ‌.

ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನದವರೆಗೆ ಏಳು ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಎರಡು ಪ್ರಕರಣಗಳು ಹಾಗೂ ಸೂರ್ಯ ನಗರಿ ಕಲಬುರಗಿ ಜಿಲ್ಲೆಯಲ್ಲಿ ಐದು ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.

ರಾಜ್ಯದಲ್ಲಿ ಕಲಬುರಗಿಯ ನಾಲ್ಕು ತಿಂಗಳ ಮಗುವಿಗೂ ಸೋಂಕು ಪತ್ತೆಯಾಗಿದೆ. 

ಇದರಿಂದ ರಾಜ್ಯದಲ್ಲಿ ಸೋಂಕಿತರ 425ಕ್ಕೆ ಏರಿಕೆಯಾಗಿದೆ. 129 ಜನರು ಗುಣಮುಖರಾಗಿದ್ದು, 17 ಜನರು ಮೃತಪಟ್ಟಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 54 ವರ್ಷದ ಪುರುಷ ಮತ್ತು 28 ವರ್ಷದ ಹೆಣ್ಣು, ಕಲಬುರಗಿಯ 46, 57 ವರ್ಷದ ಪುರುಷರು, 35 ವರ್ಷದ ಮಹಿಳೆ, ನಾಲ್ಕು ತಿಂಗಳ ಮಗು ಮತ್ತು 26 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 7 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 425ಕ್ಕೆ ಏರಿದೆ. #ಮನೆಯಲ್ಲೇಇರಿ pic.twitter.com/FdOk2Ki0C0

SCROLL FOR NEXT