ಸಾಂದರ್ಭಿಕ ಚಿತ್ರ 
ರಾಜ್ಯ

ಜ್ವರ ಬಂದಿದೆಯೇ, ಅಪಾರ್ಟ್ ಮೆಂಟ್ ಒಳಗೆ ಬರಬೇಡಿ: ನಿವಾಸಿಗಳಿಗೆ ಅಸೋಸಿಯೇಷನ್ ಆದೇಶ!

ಕೊರೋನಾ ವೈರಸ್ ಭೀತಿ ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಭೀತಿಯನ್ನುಂಟುಮಾಡಿರುವುದು ಮಾತ್ರವಲ್ಲದೆ 38 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನ ಹೊಂದಿರುವ ಜನರನ್ನು ಅಪಾರ್ಟ್ ಮೆಂಟ್ ಆವರಣದೊಳಗೆ ಬರಲು ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು: ಕೊರೋನಾ ವೈರಸ್ ಭೀತಿ ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಭೀತಿಯನ್ನುಂಟುಮಾಡಿರುವುದು ಮಾತ್ರವಲ್ಲದೆ 38 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನ ಹೊಂದಿರುವ ಜನರನ್ನು ಅಪಾರ್ಟ್ ಮೆಂಟ್ ಆವರಣದೊಳಗೆ ಬರಲು ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಜಕ್ಕೂರಿನಲ್ಲಿರುವ ಅಪಾರ್ಟ್ ಮೆಂಟ್ ವೊಂದರಲ್ಲಿ ಅಲ್ಲಿನ ವೆಲ್ಫೇರ್ ಅಸೋಸಿಯೇಷನ್ ನಿವಾಸಿಗಳಿಗೆ ಸಂದೇಶ ಕಳುಹಿಸಿ, ಅಪಾರ್ಟ್ ಮೆಂಟ್ ಒಳಗೆ ಪ್ರವೇಶಿಸುವ ಪ್ರತಿಯೊಬ್ಬರ ದೈಹಿಕ ತಾಪಮಾನವನ್ನು ಸೆಕ್ಯುರಿಟಿ ಪರೀಕ್ಷಿಸುತ್ತಾರೆ. ಯಾರದ್ದಾದರೂ ದೇಹದ ತಾಪಮಾನ 100.4 ಡಿಗ್ರಿ ಫ್ಯಾರನ್ ಹೀಟ್ ಅಥವಾ 38 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿ ಪ್ರಮಾಣಪತ್ರ ತರಬೇಕು, ಇಲ್ಲದಿದ್ದರೆ ಒಳಗೆ ಬಿಡಬೇಡಿ ಎಂದು ಸೂಚನೆ ಹೊರಡಿಸಲಾಗಿದೆ.

ಈ ಬಗ್ಗೆ ಅಪಾರ್ಟ್ ಮೆಂಟ್ ನಿವಾಸಿ ಕುಸುಮಾ, ಯಾರಾದರೂ ಹುಷಾರಿಲ್ಲದಿದ್ದರೆ ಮೊದಲಿಗೆ ಮನೆಗೆ ಕಳುಹಿಸುತ್ತಾರೆ, ಆದರೆ ಇಲ್ಲಿ ನಮ್ಮ ನಮ್ಮ ಮನೆಗಳಿಗೆ ಹೋಗಲು ಬಿಡುವುದಿಲ್ಲ. ಸಾಮಾನ್ಯ ಜ್ವರ ಬಂದವರು ಹೋಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಇನ್ನಷ್ಟು ಒತ್ತಡ ಹೇರಿದಂತಾಗುತ್ತದೆ. ಕೋವಿಡ್ ವರದಿ ಬರಲು 48 ಗಂಟೆಗಳು ಬೇಕಾಗುತ್ತದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.

ಆದರೆ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಲೋಕ್ ಜಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಸಾಮಾನ್ಯ ಜ್ವರವಾದರೆ ವೈದ್ಯರು ತಪಾಸಣೆ ಮಾಡಿ ಔಷಧಿ ಕೊಡುತ್ತಾರೆ. ಕೊರೋನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಈ ರೀತಿ ನಾವು ಕ್ರಮ ಕೈಗೊಂಡಿದ್ದೇವೆ. ಎಲ್ಲಾ 238 ಕುಟುಂಬಗಳನ್ನು ಕ್ವಾರಂಟೈನ್ ಮಾಡುವುದಿಲ್ಲ. ಎಲ್ಲರ ರಕ್ಷಣೆಯೇ ಇದರ ಹಿಂದಿನ ಉದ್ದೇಶ ಎನ್ನುತ್ತಾರೆ.

ಮತ್ತೊಂದು ಪ್ರಕರಣದಲ್ಲಿ ಮೈಸೂರು ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ವೊಂದನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ನಿವಾಸಿಗಳು ಲಾಕ್ ಡೌನ್ ಘೋಷಣೆಯಾದ ದಿನದಿಂದ ಮನೆಯಿಂದ ಹೊರಬಂದಿಲ್ಲ. ನಿವಾಸಿಗಳಿಗೆ ಎಲ್ಲವೂ ಮನೆಬಾಗಿಲಿಗೆ ಸಿಗುವಂತೆ ಅಸೋಸಿಯೇಷನ್ ವ್ಯವಸ್ಥೆ ಮಾಡಿದೆ. ಕೋರಮಂಗಲದಲ್ಲಿರುವ ಅಪಾರ್ಟ್ ಮೆಂಟ್ ವೊಂದರಲ್ಲಿ ನಿನ್ನೆಯಿಂದ ಮನೆಕೆಲಸದವರನ್ನು ಮನೆಯೊಳಗೆ ಸೇರಿಸಲಾಗುತ್ತಿದೆ.ಆದರೆ ಅವರು ಇನ್ನು 15 ದಿನಗಳವರೆಗೆ ತಮ್ಮ ಮನೆಗೆ ಹೋಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ ಉಪಾಧ್ಯಕ್ಷ ಮುರಳೀಧರ್ ರಾವ್, ಆಯಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಿವಾಸಿಗಳ ಸುರಕ್ಷತೆ ಆಯಾ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಗಳ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT