ರಾಜ್ಯ

ಲಾಕ್ ಡೌನ್ ನಡುವೆಯೂ ಬೆಂಗಳೂರಿನಿಂದ ತಮ್ಮ ದೇಶಗಳಿಗೆ ತೆರಳಿದ 3 ಸಾವಿರ ವಿದೇಶಿಗರು!

Shilpa D

ಬೆಂಗಳೂರು: ದೇಶಾದ್ಯಂತ ಕಠಿಣ ಲಾಕ್ ಡೌನ್ ಜಾರಿಯಲ್ಲಿದ್ದರೂ ಬೆಂಗಳೂರಿನಲ್ಲಿದ್ದ ಸುಮಾರು 3 ಸಾವಿರ ವಿದೇಶಿ ಪ್ರಜೆಗಳು ತಮ್ಮ ದೇಶಗಳಿಗೆ ತೆರಳಿದ್ದಾರೆ.

ಸುಮಾರು 22 ವಿಮಾನಗಳಲ್ಲಿ  17 ದೇಶಗಳಿಗೆ 3 ಸಾವಿರ ಮಂದಿನ್ನು ಸುರಕ್ಷಿತವಾಗಿ ಅವರ ದೇಶಗಳಿಗೆ ಕಳುಹಿಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕಳುಹಿಸಲಾಗಿದೆ.  "ಮಾರ್ಚ್ 31 ರಂದು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಮೊದಲ ಹಾರಾಟ ನಡೆಸಿತು.ಜಪಾನ್ ಏರ್‌ಲೈನ್ಸ್ ಟೋಕಿಯೊಗೆ ಮೂರು ವಿಮಾನಗಳನ್ನು ಮತ್ತು ಕೊರಿಯನ್ ಏರ್ ವಿಮಾನವನ್ನು ಇಂಚಿಯಾನ್‌ಗೆ  ಪ್ರಯಾಣ ಬೆಳೆಸಿತು.

ಪ್ರತಿ ಹಾರಾಟದ ಮೊದಲು ಮತ್ತು ನಂತರ ವಿಮಾನ ನಿಲ್ದಾಣವನ್ನು ಸ್ವಚ್ಛ ಗೊಳಿಸಿ ಸ್ಯಾನಿಟೈಸ್ ಮಾಡಲಾಯಿತು.ಪ್ರಯಾಣಿಕರು ಕೂಡ  ಸಾಮಾಜಿಕ ದೂರವನ್ನು ಕಾಯ್ದುಕೊಂಡರು ಮತ್ತು ನಿರ್ಗಮನ ಟರ್ಮಿನಲ್‌ನಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ನೀಡಲಾಗಿತ್ತು.

ಮಾರ್ಚ್ 25 ರಿಂದ ಏಪ್ರಿಲ್ 15ರ ವರೆಗೆ ಲಾಕ್ ಡೌನ್ ಆರಂಭವಾದಾಗಿನಿಂದ ಬೆಂಗಳೂರು ಮತ್ತು ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದ ವಿದೇಶಿ ಪ್ರಜೆಗಳನ್ನು ಅವರವರ ದೇಶಗಳಿಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ.
 

SCROLL FOR NEXT