ರಾಜ್ಯ

ಶಿವಮೊಗ್ಗ: ಕಂಡಕಂಡಲ್ಲಿ ಉಗಿದರೆ ಭಾರೀ ದಂಡ!

Nagaraja AB

ಶಿವಮೊಗ್ಗ: ಎಲ್ಲೆಂದರಲ್ಲಿ ಉಗಿಯುವವರು, ಮಾಸ್ಕ್‌ ಹಾಕದೆ ನಗರದಾದ್ಯಂತ ಓಡಾಡುತ್ತಿರುವವರಿಗೆ ಈಗ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸುತ್ತಿದೆ. ದಿಢೀರ್‌ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ ದಂಡ ಹಾಕಿದ್ದಾರೆ

ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಗ್ಗೆಯಿಂದ ಶಿವಮೊಗ್ಗ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಕಂಡಕಂಡಲ್ಲಿ ಉಗಿಯುವವರನ್ನು ಹಿಡಿದು, ಸ್ಥಳದಲ್ಲೇ ದಂಡ ಕಟ್ಟಸಿಕೊಂಡು ಎಚ್ಚರಿಸುತ್ತಿದ್ದಾರೆ.

ಪದೇ ಪದೇ ಅದೇ ತಪ್ಪು ಮಾಡುವವರಿಗೆ ಇನ್ನಷ್ಟು ಚುರುಕು ಮುಟ್ಟಿಸುವ ಸಲುವಾಗಿ ದಂಡವನ್ನು ದ್ವಿಗುಣ ಮಾಡಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಒಮ್ಮೆ ದಂಡ ಕಟ್ಟಿ ಮತ್ತೊಮ್ಮೆ ರಸ್ತೆ ಮೇಲೆ ಉಗುಳಿ ಸಿಕ್ಕಿಬಿದ್ದರೆ, ಡಬಲ್ ದಂಡ ಪಾವತಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಮೊದಲ ಬಾರಿಗೆ ದಂಡ ಕಟ್ಟಿದವರ ಹೆಸರು, ವಿಳಾಸ, ಮೊಬೈಲ್ ನಂಬರ್‌ಗಳನ್ನು ಪಾಲಿಕೆ ಸಿಬ್ಬಂದಿ ಪಡೆದುಕೊಳ್ಳುತ್ತಾರೆ. ಸ್ಥಳದಲ್ಲೇ ದಂಡ ಕಟ್ಟಿದ್ದಕ್ಕೆ ಡಿಜಿಟಲ್ ರಶೀದಿ ಕೊಡುತ್ತಿದ್ದಾರೆ

ಸಾರ್ವಜನಿಕ ಸ್ಥಳ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಉಗುಳಿದರೆ ಮೊದಲ ಬಾರಿಗೆ 500 ರೂ. ದಂಡ. ಎರಡನೇ ಬಾರಿಗೆ 1000 ರೂ. ದಂಡ , ತಂಬಾಕು, ಗುಟ್ಕಾ ಮತ್ತು ಮದ್ಯ ಮಾರಾಟ ಮಾಡಿದರೆ 500 ರೂ. ದಂಡ, ಎರಡನೇ ಬಾರಿಗೆ 1000 ರೂ. ದಂಡ,ಸಾರ್ವಜನಿಕ ಸ್ಥಳ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಮಾಸ್ಕ್ ಧರಿಸದೆ ಇದ್ದರೆ ಮೊದಲ ಬಾರಿಗೆ 100 ರೂ. ದಂಡ, ಎರಡನೇ ಬಾರಿಗೆ 200 ರೂ. ದಂಡ ಕಟ್ಟಬೇಕಾಗುತ್ತದೆ ಅಂತಾ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಆದೇಶ ಹೊರಡಿಸಿದ್ದಾರೆ

ಇನ್ನು ಉಗುಳಿದ್ದಕ್ಕೆ, ತಂಬಾಕು ಉತ್ಪನ್ನ ಮಾರಾಟಕ್ಕೆ, ಮಾಸ್ಕ್ ತೊಡದೆ ಇದ್ದಿದ್ದಕ್ಕೆ ದಂಡ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದಂಡದ ರಶೀದಿಯ ಫೋಟೊಗಳು ವೈರಲ್ ಆಗಿದೆ.ರಶೀದಿಯಲ್ಲಿರುವ ಮೊಬೈಲ್‍ ನಂಬರ್‌ಗಳಿಗೆ ಸಾರ್ವಜನಿಕರು ಕರೆ ಮಾಡಿ, ನಿಜವೇ ಎಂದು ಜನರು ಪರೀಕ್ಷಿಸಿಕೊಳ್ಳುತ್ತಿದ್ದಾರೆ.

SCROLL FOR NEXT