ಉದ್ಯಮಿ ರಿತೇಶ್ 
ರಾಜ್ಯ

ನೃತ್ಯದ ಮೂಲಕ ಜನರಲ್ಲಿ ಕೋವಿಡ್-19 ಭೀತಿ ಹೋಗಲಾಡಿಸುವ ಉದ್ಯಮಿ ರಿತೇಶ್!

ನಗರದಲ್ಲಿ ಅಫೆರಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ  ರಿತೇಶ್ ಪಾಂಡ್ಯ ಎಂಬುವರು ಜನರು ಸೇರಿರುವ ಕಡೆಗಳಲ್ಲಿ ನೃತ್ಯ ಮಾಡುವ ಮೂಲಕ ಕೋವಿಡ್-19 ಬಗೆಗಿನ ಭೀತಿಯನ್ನು ದೂರ ಮಾಡುತ್ತಿದ್ದಾರೆ.

ಬೆಂಗಳೂರು: ನಗರದಲ್ಲಿ ಅಫೆರಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ ರಿತೇಶ್ ಪಾಂಡ್ಯ ಎಂಬುವರು ಜನರು ಸೇರಿರುವ ಕಡೆಗಳಲ್ಲಿ ನೃತ್ಯ ಮಾಡುವ ಮೂಲಕ ಕೋವಿಡ್-19 ಬಗೆಗಿನ ಭೀತಿಯನ್ನು ದೂರ ಮಾಡುತ್ತಿದ್ದಾರೆ.

ಕಳೆದ ತಿಂಗಳು ಉದ್ಯಮಿ ರಿತೇಶ್ ಪಾಂಡ್ಯ ಅವರ 64 ವರ್ಷದ ತಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ನಂತರ ಅವರು ಚೇತರಿಸಿಕೊಂಡಿದ್ದು,ಇದರ ಅನುಭವ ಪಡೆದುಕೊಂಡ ರಿತೇಶ್, ಅಧಿಕ ಜನರು ಇರುವ ಕಡೆಗಳಿಗೆ ತೆರಳಿ,ತಮ್ಮ ಅನುಭವ
ಹೇಳಿಕೊಳ್ಳುವ ಮೂಲಕ ಕೋವಿಡ್-19 ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಇನ್ನೂ ಹೆಚ್ಚಿನ ಜನರ ಬಳಿಗೆ ತೆರಳಲು ಸ್ನೇಹಿತ ಶ್ರೀಕರ್ ಜೊತೆಗೆ ತಮಟೆಯೊಂದಿಗೆ  ಗಾಯನ- ನೃತ್ಯ ಮಾಡಲು ನಿರ್ಧರಿಸಿದ ರಿತೇಶ್,  ಸ್ಥಳೀಯ ಜನರನ್ನು ಆಕರ್ಷಿಸುವ ಮೂಲಕ ಸುರಕ್ಷತೆ ಮತ್ತು ಮನೆಯಲ್ಲಿ ತಂಗುವುದರ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಿದ್ದಾರೆ.

ಕೋವಿಡ್-19 ಭೀತಿಯಿಂದ ದೂರವಾಗಲು ಏನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ವಿಡಿಯೋವೊಂದನ್ನು ಮಾಡಲಾಗಿದ್ದು, ಅದರಲ್ಲಿ 12 ಸ್ನೇಹಿತರು ಒಟ್ಟಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಪಾಂಡ್ಯನ್ನಿರ್ವಹಣೆ ಮಾಡುತ್ತಿರುವ ಫೇಸ್ ಬುಕ್  ಗ್ರೂಪ್ ವೊಂದರಲ್ಲಿ 22 ಸಾವಿರ ಸದಸ್ಯರಿದ್ದು, ತಮ್ಮ ಜೀವನದ ಅನುಭವ ಹಂಚಿಕೊಂಡಿದ್ದಾರೆ.

ಶ್ರೀಕರ್ ಸಾಹಿತ್ಯ ರಚಿಸಿದ ಬಳಿಕ ಇಬ್ಬರು ಜೊತೆಗೂಡಿ ಸಾಮಾಜಿಕ  ಮಾಧ್ಯಮದ ಸ್ನೇಹಿತರನ್ನು ಸಂಪರ್ಕಿಸಿದ್ದು, ಅವರಿಗೆ ಹಾಡು
ಹೇಳಲು ಹೇಳಿ, ಮನೆಯಲ್ಲಿನ ಕೆಲಸದ ಬಗ್ಗೆ ಹೇಳಿಕೆ ಪಡೆದುಕೊಂಡಿದ್ದು, ಇಡೀ ಜಗತ್ತಿನಾದ್ಯಂತ ಹಣ ಇದ್ದರೂ ಹಾಸಿಗೆ
ಲಭ್ಯ ಇಲ್ಲದಿರುವುದು ಸೇರಿದಂತೆ ಎಲ್ಲ ವಿವರವನ್ನು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

ಮಾನವೀಯತೆ ನಿಟ್ಟಿನಲ್ಲಿ ಗಂಭೀರವಾದ ಸಮಸ್ಯೆಗಳ ಬಗ್ಗೆ ಸಂದೇಶ ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದ್ದು,
40 ಸೆಕೆಂಡ್ ನಷ್ಟಿರುವ ಈ ವಿಡಿಯೋವನ್ನು ಈವರೆಗೂ ಸುಮಾರು 2 ಲಕ್ಷ ಜನರು ವೀಕ್ಷಿಸಿದ್ದಾರೆ. ತಮ್ಮ ತಂದೆ ಗುಣಮುಖರಾದ 
ನಂತರ ಇಂಗ್ಲಿಷ್ ನಲ್ಲಿ ಮೊದಲ ವಿಡಿಯೋ ಮಾಡಿದ್ದು, ಅದನ್ನು ಕನ್ನಡದಲ್ಲಿ ಮಾಡಲು ಉತ್ಸುಕರಾಗಿರುವುದಾಗಿ ರಿತೀಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT