ರಾಜ್ಯ

ಹುಬ್ಬಳ್ಳಿ: ರೌಡಿಶೀಟರ್ ಮೇಲೆ ಹಾಡಹಗಲೇ ಗುಂಡಿನ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

Raghavendra Adiga

ಹುಬ್ಬಳ್ಳಿ: ನಗರದಲ್ಲಿ ಹಾಡಹಗಲೇ ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಹುಬ್ಬಳ್ಳಿ ಜನತೆ ಬೆಚ್ಚಿ ಬಿದ್ದಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಹುಬ್ಬಳ್ಳಿಯ ದುರ್ಗಾ ಬಾರ್ ಬಳಿ ನಿಂತಿದ್ದ ರೌಡಿ ಮೇಲೆ ಏಕಾಏಕೀ ಗುಂಡು ಹಾರಿಸಿದ್ದಾರೆ.

ಗುಂಡಿನ ದಾಳಿಗೆ ತುತ್ತಾದ ವ್ಯಕ್ತಿಯನ್ನು ರೌಡಿಶೀಟರ್ ಫ್ರೂಟ್ ಇರ್ಫಾನ್ (52) ಎಂದು ಗುರುತಿಸಲಾಗಿದೆ. 

ನಾಲ್ವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು ಶೂಟ್ ಮಾಡುವ ಹಾಗೂ ಆನಂತರ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 ಗುಂಡಿನ ದಾಳಿ ನಡೆಯುವಾಗ ಫ್ರೂಟ್ ಇರ್ಫಾನ್ ಸಂಬಂಧಿಗಳ ಜತೆ ಮಾತನಾಡುತ್ತಾ ನಿಂತಿದ್ದಾಗಿ ವರದಿಯಾಗಿದೆ, ಗುಂಡೇಟು ಬಿದ್ದ ತಕ್ಷಣ ಆತನನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತಿದೆ.

ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಜೀವ ಗುಂಡು ಹಾಗೂ ಒಂದು  ಗುಂಡಿನ ಎಮ್ಟಿ ಕೇಸ್ ಸಹ ವಶಕ್ಕೆಪಡೆದಿದ್ದಾರೆ. 

SCROLL FOR NEXT