ರಾಜ್ಯ

ಹೇಮಾವತಿ ಜಲಾಶಯ ಪರಿಶೀಲಿಸಿದ ಸಚಿವ ಗೋಪಾಲಯ್ಯ: ಕೆರೆ, ಕಟ್ಟೆ, ನಾಲೆಗಳಿಗೆ ನೀರು ಬಿಡಲು ಸೂಚನೆ 

Nagaraja AB

ಹಾಸನ: ಹೇಮಾವತಿ ಜಲಾನಯನ ಪ್ರದೇಶಗಳ ಕೆರೆ-ಕಟ್ಟೆಗಳನ್ನು ತುಂಬಿಸಲು ಹಾಗೂ ಇತರ ಜಿಲ್ಲೆಗಳಿಗೆ ನಾಲೆಗಳ ಮೂಲಕ ನೀರನ್ನು ಹರಿಬಿಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಜಲಾಶಯದ ಇಂಜಿನಿ ಯರ್ ಗಳೊಂದಿಗೆ ಮಾತನಾಡಿದರು.ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿ ಕೆ ಕ್ರಮವಾಗಿ ಹೆಚ್ಚುವರಿ ನೀರನ್ನು ಹರಿಬಿಡಲು ತಿಳಿಸಿದರು.

ಹೇಮಾವತಿ ಜಲಾಶಯಕ್ಕೆ ಒಳಪಡುವ ಜಿಲ್ಲೆಗಳಾದ ತುಮಕೂರು ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ಕೆರೆಕಟ್ಟೆಗಳ ನೀರು ತುಂಬಿಸಲು ನಾಲೆಗಳಿಗೆ ನೀರನ್ನು ಬಿಡುವಂತೆ ಸೂಚನೆ ನೀಡಿದರು.

ಹೇಮಾವತಿ ಜಲಾಶಯಕ್ಕೆ ಈಗಾಗಲೇ ೫೦ ಸಾವಿರ ಕ್ಯೂಸೆಕ್ಸ್ ನೀರು ಒಳಹರಿವಿದ್ದು ೨೦ ಸಾವಿರ ಕ್ಯೂಸೆಕ್ಸ್ ನೀರು ನಾಲೆ ಹಾಗೂ ನದಿಗೆ ಹರಿಬಿಡಲಾಗುತ್ತಿದೆ.ಮತ್ತೊಂದೆಡೆ ಜಿಲ್ಲೆಯ ಸಕಲೇಶಪುರ,ಅರಕಲಗೂಡು,ಬೇಲೂ ರು,ಹಳೇ ಬೀಡು,ಆಲೂರು ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹಳ್ಳ,ಕೊಳ್ಳಗಳು,ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶದಲ್ಲಿರುವ ಸಾರ್ವಜನಿಕರ ಎಚ್ಚರಿಕೆವಹಿಸುವಂತೆ ಅವರು ಮನವಿ ಮಾಡಿದ್ದಾರೆ.

SCROLL FOR NEXT