ರಾಜ್ಯ

ರಾಜ್ಯದಲ್ಲಿ ಇದೀಗ 100 ಕೋವಿಡ್ ಸೋಂಕು ಪತ್ತೆ ಪ್ರಯೋಗಾಲಯಗಳು- ಸಚಿವ ಡಾ.ಕೆ.ಸುಧಾಕರ್ 

Nagaraja AB

ಬೆಂಗಳೂರು: ರಾಜ್ಯದಲ್ಲಿ ಇದೀಗ 100 ಕೋವಿಡ್ ಸೋಂಕು ಪತ್ತೆ ಪ್ರಯೋಗಾಲಯಗಳು ಇರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

45 ಸರ್ಕಾರಿ ಮತ್ತು 55 ಖಾಸಗಿ ಪ್ರಯೋಗಾಲಯಗಳಿದ್ದು, ರಾಜ್ಯದಾದ್ಯಂತ 16 ಲಕ್ಷದ 68 ಸಾವಿರದ 511 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶೇ 79. 85 ( 13, 32,464) ಪರೀಕ್ಷೆಗಳು ಆರ್ ಟಿ- ಪಿಸಿಆರ್ ಮತ್ತಿತರ ವಿಧಾನಗಳ ಪರೀಕ್ಷೆಯಾಗಿದೆ. ಉಳಿದ 3, 36, 047 ಪರೀಕ್ಷೆಗಳು ರಾಪಿಡ್ ಅಂಟಿಜೆನ್ ಟೆಸ್ಟ್ ಗಳಾಗಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಂತೆ ಬೆಂಗಳೂರು ನಗರದಾದ್ಯಂತ ಕೋವಿಡ್ ಮತ್ತು ಕೋವಿಡ್ ಯೇತರ
ರೋಗಿಗಳನ್ನು ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲು 665 ಅಂಬ್ಯುಲೆನ್ಸ್ ಗಳ  ವ್ಯವಸ್ಥೆ ಮಾಡಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.

SCROLL FOR NEXT