ರಾಜ್ಯ

ಬೆಳಗಾವಿಯಲ್ಲಿ ಧಾರಾಕಾರ ಮಳೆ: ಉಕ್ಕಿ ಹರಿಯುತ್ತಿರುವ ನದಿಗಳು; ಜನ-ಜಾನುವಾರುಗಳಿಗೆ ಸೂರು ನಿರ್ಮಾಣ

Shilpa D

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಈ ವರ್ಷವೂ ತುಂಬಿ ಹರಿಯುತ್ತಿದೆ, ನದಿಗಾಗಿ ನಿರ್ಮಿಸಿರುವ ಜಲಾಶಯಗಳು ಕೂಡ ತುಂಬಿವೆ.

ಪ್ರವಾಹದ ಸಮಯದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ತಗ್ಗಿಸಲು,  573ಸಮುದಾಯ ಭವನಗಳು 230 ಗೋಶಾಲಗಳೊಂದಿಗೆ ಜಿಲ್ಲಾಡಳಿತ ಸಿದ್ಧವಾಗಿದೆ. 27 ದೋಣಿಗಳು ರಕ್ಷಣಾ ಕಾರ್ಯಕ್ಕಾಗಿ ಸಿದ್ದವಾಗಿವೆ.

ಮಹಾರಾಷ್ಟ್ರದ ಕೊಲ್ಹಾಪುರ ಸೇರಿದಂತೆ ಮುಂದಿನ ಒಂದುವಾರದ ಕಾಲ ಕರಾವಳಿ ತೀರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ, ಕೃಷ್ಣಾ, ಘಟಪ್ರಭಾ, ದೂದ್ ಗಂಗಾ, ವೇದಗಂಗಾ, ಮಾರ್ಕಂಡೇಯ ನದಿಗಳು ಮತ್ತು ಬಳ್ಳಾರಿ ನಾಲೆಗಳು ಉಕ್ಕಿ ಹರಿಯುತ್ತಿವೆ.

ಅಧಿಕಾರಿಗಳು ಹಳ್ಳಿಗಳಿಂದ ಜನರು ಮತ್ತು ಜಾನುವಾರುಗಳನ್ನು ನದಿ ಜಲಾನಯನ ಪ್ರದೇಶಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಹೀಗಾಗಿ ಜಿಲ್ಲಾಡಳಿತ ಸಮುದಾಯಭವನ. ಛತ್ರ, ಶಾಲಾ ಕಟ್ಟಡಗಳಿಗೆ ಜನರನ್ನು ವರ್ಗಾಯಿಸಬೇಕಾಗುತ್ತದೆ.

25 ಎನ್ ಡಿ ಆರ್ ಎಫ್ ಸಿಬ್ಬಂದಿ, ಮತ್ತು 20 ಎಡಿ ಆರ್ ಎಫ್ ಸಿಬಂದಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಸಿದ್ದವಾಗಿದ್ದಾರೆ. ಕೃಷ್ಣ ಮತ್ತು ಘಟಪ್ರಭಾ ಮಲಪ್ರಬಾ ನದಿಗಳು ನೀರಿನ ಮಟ್ಟ ಏರಿಕೆಯಾಗುತ್ತಿದೆ,  ಇನ್ನೂ ಸಿದ್ಧತೆಗಳನ್ನು ಪರಿಶೀಲಿಸಲು ತಾಲೂಕು ಮಟ್ಟದಲ್ಲಿ  ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂಜಿ ಹೀರೆಮಠ್ ತಿಳಿಸಿದ್ದಾರೆ.

SCROLL FOR NEXT