ಸಚಿವ ಅಶೋಕ್ 
ರಾಜ್ಯ

ಹೆಚ್ಚು ಪ್ರವಾಹ ಪರಿಸ್ಥಿತಿ ಎದುರಾಗುವ 10 ಜಿಲ್ಲೆಗಳಲ್ಲಿ ಶಾಶ್ವತ ಪುನಶ್ಚೇತನ ಭವನ ನಿರ್ಮಾಣ: ಸಚಿವ ಆರ್.ಅಶೋಕ್

ರಾಜ್ಯದಲ್ಲಿ ಹೆಚ್ಚು ಪ್ರವಾಹ ಪರಿಸ್ಥಿತಿ ಎದುರಿಸುವ 10 ಜಿಲ್ಲೆಯಲ್ಲಿ ಶಾಶ್ವತವಾಗಿ ಪುನಶ್ಚೇತನ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಪ್ರವಾಹ ಪರಿಸ್ಥಿತಿ ಎದುರಿಸುವ 10 ಜಿಲ್ಲೆಯಲ್ಲಿ ಶಾಶ್ವತವಾಗಿ ಪುನಶ್ಚೇತನ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. 

ಕರ್ನಾಟಕ ಸೇರಿದಂತೆ ಪ್ರವಾಹ ಪೀಡಿತ ರಾಜ್ಯಗಳ ಜೊತೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಸಂವಾದ ನಡೆಸಿದರು, 

ಪ್ರಧಾನಿ ಮೋದಿಯವರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಅವರು, ಹೆಚ್ಚು ಪ್ರವಾಹ ಪರಿಸ್ಥಿತಿ ಎದುರಾಗುವ 10 ಜಿಲ್ಲೆಯಲ್ಲಿ ಶಾಶ್ವತವಾಗಿ ಪುನಶ್ಚೇತನ ಭವನ ನಿರ್ಮಿಸಲು ನಿರ್ಧರಿಸಲಾಗಿದೆ. ಭವನದಲ್ಲಿ ಆಸ್ಪತ್ರೆ, ಗ್ರಂಥಾಲಯ, ವಾಸ್ತವ್ಯ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಿರಲಿದೆ. ಇದಕ್ಕಾಗಿ ರೂ.200 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಪ್ರವಾಹ ಸಂತ್ರಸ್ತರು ಆರೋಗ್ಯದ ದೃಷ್ಟಿಯಿಂದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ರ್ಯಾಪಿಡ್ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. 

ನೆರೆ ಸಂತ್ರಸ್ತರಿಗೆ ಪೌಷ್ಟಿಕ ಆಹಾರ
ಪ್ರವಾಹ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಪೌಷ್ಠಿಕಾಂಶ ಆಹಾರ ನೀಡಲು ನಿರ್ಧರಿಸಲಾಗಿದ್ದು, ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆಗೆ ಮೊಟ್ಟೆ, ಉಪ್ಪಿನಕಾಯಿ, ಪಲ್ಯ, ಮೊಸಲು ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಪ್ರವಾಸ ಸಂತ್ರಸ್ತರಿಗೆ ಕೇವಲ ಅನ್ನ ಸಂಬಾರು ಮಾತ್ರ ನೀಡಲಾಗುತ್ತಿತ್ತು. ನೊಂದು ಬಂದಿರುವ ಜನರಿಗೆ ಕೇವಲ ಅನ್ನ ಸಂಬಾರು ನೀಡುವುದು ಸರಿಯಲ್ಲ. ನೊಂದವರಿಗೆ ಪೌಷ್ಟಿಕಾಂಶದ ಆಹಾರ ನೀಡುವುದು ಮುಖ್ಯ ಎಂಬುದನ್ನು ಅರಿತು ಇನ್ನು ಮುಂದೆ ಮಧ್ಯಾಹ್ನ ಹಾಗೂ ರಾತ್ರಿ ಊಟದ ವೇಳೆ ಮೊಟ್ಟೆ, ಉಪ್ಪಿನಕಾಯಿ, ಪಲ್ಯ, ಮೊಸಲು ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ. 

2019ರ ಪ್ರವಾಹ ಪರಿಸ್ಥಿತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 2019ರಲ್ಲಿ ಮಳೆಯಿಂದಾಗಿ ಮನೆ ಬಿದ್ದವರಿಗೆ ಹಣ ನೀಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ, ಸರ್ಕಾರವು 21 ಜಿಲ್ಲೆಗಳಿಗೆ ರೂ.334.29 ಕೋಟಿ ಬಿಡುಗಡೆ ಮಾಡಿದೆ ಎಂದು ಜಿಲ್ಲಾವಾರು ಮಾಹಿತಿ ನೀಡಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರೆದ ಉದ್ವಿಗ್ನತೆ; ಇರಾನ್‌-ಅಮೆರಿಕಾ ನಡುವೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ..!

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಇದು ಅಪಾಯಕಾರಿ-ಬೇಜವಾಬ್ದಾರಿ ನಡೆ; ಅಮೆರಿಕಾ ವಿರುದ್ಧ ಚೀನಾ ಕಿಡಿ

ದೇಶದ ಹಿತಾಸಕ್ತಿಯೇ ಮುಖ್ಯ, ಭಾರತದ ಪರವಾಗಿ ಲಾಬಿ ನಡೆಸುವಂತೆ ಅತ್ತೆ-ಮಾವ ಎಂದಿಗೂ ಒತ್ತಡ ಹೇರಿಲ್ಲ: H-1B ಕಠಿಣ ನಿಯಮ ಸಮರ್ಥಿಸಿಕೊಂಡ ಜೆಡಿ ವ್ಯಾನ್ಸ್..!

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

SCROLL FOR NEXT