ರಾಜ್ಯ

ಬೆಂಗಳೂರು: ಸಿವಿ ರಾಮನ್‌ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ಯೂಟ್‌; 20 ಕೋವಿಡ್ ರೋಗಿಗಳ ಸ್ಥಳಾಂತರ

Vishwanath S

ಬೆಂಗಳೂರು: ನಗರದ ಕೋವಿಡ್‌ ನಿಗದಿತ ಇಂದಿರಾನಗರದ ಸಿವಿ ರಾಮನ್‌ ಆಸ್ಪತ್ರೆಯಲ್ಲಿ ಕಾಣಿಸಿಕೊಮಡ ಶಾರ್ಟ್ ಸರ್ಕ್ಯೂಟ್‌ ನಿಂದ ಕೇಂದ್ರೀಕೃತ ಆಮ್ಲಜನಕ ಪೈಪ್‌ ಕತ್ತರಿಸಲ್ಪ ಹಿನ್ನೆಲೆಯಲ್ಲಿ, ಅಲ್ಲಿದ್ದ ಸುಮಾರು 20 ಕೋವಿಡ್‌ ರೋಗಿಗಳನ್ನು ಮೂರು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. 

ಈ ರೋಗಿಗಳು ಹೈ ಡಿಪೆಂಡೆನ್ಸಿ ಘಟಕದಲ್ಲಿ (ಎಚ್‌ಡಿಯು) ಚಿಕಿತ್ಸೆ ಪಡೆಯುತ್ತಿದ್ದರು.  ಆಸ್ಪತ್ರೆಯಲ್ಲಿ ಸದ್ಯ 175 ಕೋವಿಡ್‌ ಹಾಸಿಗೆಗಳಿದ್ದು, 80ರಿಂದ 90 ರೋಗಿಗಳು ದಾಖಲಾಗಿದ್ದರು. ಈಪೈಕಿ 20 ರೋಗಿಗಳಿದ್ದ ಹಾಸಿಗೆಯ ಪ್ರದೇಶದ ಆಮ್ಲಜನಕ ಪೈಪ್‌ ಕತ್ತರಿಸಲ್ಪಟ್ಟಿತ್ತು.  ತಕ್ಷಣ ಇತರ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ ಅವರನ್ನು ಸ್ಥಳಾಂತರಿಸಲಾಯಿತು.

16 ಕೋವಿಡ್‌ ರೋಗಿಗಳನ್ನು 10 ಕಿಮೀ ದೂರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ, ಓರ್ವ ರೋಗಿಯನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಉಳಿದವರನ್ನು ಸಿವಿ ರಾಮನ್‌ ವೈದೇಹಿ ಆಸ್ಪತ್ರೆಗೆ ಸೇರಿಸಲಾಯಿತು.

SCROLL FOR NEXT