ರಾಜ್ಯ

ಕೊರೋನಾ: 120 ಅಂತ್ಯಕ್ರಿಯೆಗಳಿಗೆ ಸಹಾಯ ಮಾಡಿ ಇತರರಿಗೆ ಪ್ರೇರಣೆಯಾದ ಮೈಸೂರು ವ್ಯಕ್ತಿ!

Manjula VN

ಮೈಸೂರು: ಕೊರೋನಾ ವೈರಸ್ ಎಂಬ ಹೆಸರು ಕೇಳಿದರೆ ಜನರು ಬೆಚ್ಚಿ ಬೀಳುತ್ತಿರುವ ಈ ದಿನಗಳಲ್ಲಿ ಮೈಸೂರು ಮೂಲದ ವ್ಯಕ್ತಿಯೊಬ್ಬರು 120 ಮಂದಿ ಸೋಂಕಿತ ವ್ಯಕ್ತಿಗಳ ಅಂತ್ಯಕ್ರಿಯೆ ನಡೆಸಲು ಸಹಾಯ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. 

ಆಯುಬ್ ಅಹ್ಮದ್ ಅವರು ಸೋಂಕಿತರ ಮೃತದೇಹಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲು ಪಾಲಿಕೆ ಅಧಿಕಾರಿಗಳಿಗೆ ಸಹಾಯ ಮಾಡಿದ್ದಾರೆ. 

ಬೇರೆ ಬೇರೆ ಧರ್ಮಕ್ಕೆ ಸೇರಿದ 10,000 ಜನರಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಅಹ್ಮದ್ ಅವರು ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದಾರೆ. 

ಈ ಕುರಿತು ಮಾಹಿತಿ ತಿಳಿದ ಮೈಸೂರು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತರ ಅಂತ್ಯಸಂಸ್ಕಾರಕ್ಕೂ ಸಹಾಯ ಮಾಡುವಂತೆ ಅಹ್ಮದ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದರಂತೆ ಅಹ್ಮದ್ ಅವರು ಈ ವರೆಗೂ 120 ಮಂದಿ ಸೋಂಕಿತ ವ್ಯಕ್ತಿಗಳ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡಿದ್ದಾರೆ. 

ಜಿಲ್ಲೆಯಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅಹ್ಮದ್ ಅವರ ಸಹಾಯ ಪಡೆಯಲು ನಾವು ಮುಂದಾಗಿದ್ದೆವು. ಈ ವೇಳೆ ಯಾವುದೇ ಆಲೋಚನೆಯನ್ನೂ ಮಾಡದೆ ಅಹ್ಮದ್ ಅವರು ಒಪ್ಪಿದ್ದರು. ಇಂತಹ ನಿಸ್ವಾರ್ಥ ಸೇವೆಗೆ ಯಾರೂ ಒಪ್ಪುವುದಿಲ್ಲ. ಆದರೆ, ಅಹ್ಮದ್ ಒಪ್ಪಿದ್ದರು. ಅವರ ಸೇವೆಯನ್ನು ಶ್ಲಾಘಿಸಲೇಬೇಕು ಎಂದು ಮೈಸೂರು ನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಜಯಂತ್ ಅವರು ಹೇಳಿದ್ದಾರೆ. 

SCROLL FOR NEXT