ರಾಜ್ಯ

ಡಿಜೆ ಹಳ್ಳಿ ಗಲಭೆ ಪ್ರಕರಣ: ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಖಾಕಿ‌ ವಶಕ್ಕೆ

Shilpa D

ಬೆಂಗಳೂರು: ಇತ್ತೀಚೆಗೆ ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಕೆ. ವಾಜಿದ್ ಪಾಷಾ ಬಂಧಿತ ಆರೋಪಿ. ಸಿಸಿಬಿ ಪೊಲೀಸರು ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ವಾಜಿದ್ ಪಾಷಾ ಅವರು, ಕೆಲ ದಿನಗಳ ಹಿಂದೆಯಷ್ಟೇ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಹಾಕಿದ್ದರು. 

ಬಳಿಕ ಪೋಸ್ಟ್​ ನಿಂದ ಆಕ್ರೋಶಗೊಂಡ ಅಖಂಡ ಶ್ರೀನಿವಾಸ ಮೂರ್ತಿಅವರ ಬೆಂಬಲಿಗರು ವಾಜೀದ್​​ ವಿರುದ್ಧ ಪೊಲೀಸ್​​ ಠಾಣೆಗೆ ತೆರಳಿದ್ದರು. ದೂರು ಬಂದ ನಂತರ ಪೊಲೀಸರು ಎರಡು ಕಡೆಯವರಿಗೂ ಬುದ್ಧಿ ಹೇಳುವ ಮೂಲಕ ರಾಜೀ ಸಂಧಾನ ಮಾಡಿಸಿದ್ದರು.

ಇತ್ತೀಚೆಗೆ ಡಿ.ಜೆ ಹಳ್ಳಿ ಗಲಭೆಗೂ ಮುನ್ನ ವಾಜೀದ್​​​ ನವೀನ್ ವಿರುದ್ಧ ದೂರು ನೀಡಿದ್ದ ಗುಂಪಿನಲ್ಲಿಯೂ ಇದ್ದ. ಆಗ ಪೊಲೀಸರು ನಮ್ಮನ್ನಾದರೇ ಐದು ಸೆಕೆಂಡಿನಲ್ಲಿ ಅರೆಸ್ಟ್​ ಮಾಡುತ್ತೀರಿ. ನವೀನ್ ಅರೆಸ್ಟ್ ಮಾಡಲು ಪೊಲೀಸರು ಮಾತ್ರ ಎರಡು ಗಂಟೆ ಕಾಲ ಸಮಯ ಕೇಳುತ್ತಿದ್ದೀರಿ. ಎರಡು ಗಂಟೆಗಳ ಸಮಯ ಯಾಕೆ ಬೇಕು ಎಂದು ಪೊಲೀಸರ ವಿರುದ್ಧ ವಾಜಿದ್ ಕೂಗಾಡಿದ್ದ ಎನ್ನಲಾಗಿದೆ.

SCROLL FOR NEXT