ರಾಜ್ಯ

ಲಾಕ್‌ ಡೌನ್‌ ಆರ್ಥಿಕ ಸಂಕಷ್ಟ; 'ಮಿಸ್ಟರ್ ಕೊಪ್ಪ' ಕೀರ್ತಿಗೆ ಪಾತ್ರರಾಗಿದ್ದ ಜಿಮ್ ತರಬೇತುದಾರ ಆತ್ಮಹತ್ಯೆ

Raghavendra Adiga

ಚಿಕ್ಕಮಗಳೂರು:  ಕೊರೊನಾ ಲಾಕ್‌ಡೌನ್‌ನಿಂದ ಜಿಮ್ ಚಟುವಟಿಕೆ ಸ್ಥಗಿತಗೊಳಿಸಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಜಿಮ್ ತರಬೇತುದಾರರೊಬ್ಬರು ಜಿಮ್‍ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.

ಜಯಪುರ ಸಮೀಪದ ದೂಬ್ಳ ಗ್ರಾಮದ ಸುನಿಲ್ (26)ಆತ್ಮಹತ್ಯೆಗೆ ಶರಣಾದವರು. ಸುನಿಲ್ ಜಯಪುರದಲ್ಲಿ ಜಿಮ್ ಸೆಂಟರ್ ನಡೆಸುತ್ತಾ, 30ರಿಂದ 40 ಮಂದಿ ಯುವಕರಿಗೆ ಜಿಮ್ ಬಗ್ಗೆ ತರಬೇತಿ ಕೊಡುತ್ತಿದ್ದರು.

ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಲಾಕ್‌ಡೌನ್‌ನಿಂದಾಗಿ ಜಿಮ್ ನಡೆಸಲು ಅವಕಾಶ ಇಲ್ಲದಿದ್ದುದರಿಂದ ಸುನೀಲ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.

ಜಿಮ್ ನಡೆಸಲಾಗದೆ ಹೋದ ಸುನೀಲ್ ಕಳೆದ ಮೂರು ತಿಂಗಳಿನಿಂದ ಆಟೋ ಚಾಲಕನಾಗಿ ಕೆಲಸ ಮಾಡಿತ್ತಿದ್ದರು. ಆದರೆ ಆರ್ಥಿಕ ಸಂಕಷ್ಟ ಬಗೆಹರಿಯದೆ ಮಾನಸಿಕ ಒತ್ತಡಕ್ಕೆ ಒಳಗಾದ ಸುನೀಲ್ ಭಾನುವಾರ ಜಿಮ್ ನಲ್ಲೇ ಆತ್ಮಹತ್ಯೆಗೆ ಶರಣಗಿದ್ದಾರೆ.

ಮೃತರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದೇಹದಾಢ್ಯ ಸ್ಪರ್ಧೆಗಳಲ್ಲಿ ಭಾಗವಹಿದ್ದು ಅಲ್ಲದೆ ಕಳೆದ ವರ್ಷ ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದರು,  

ಘಟನಾ ಸ್ಥಳಕ್ಕೆ ಜಯಪುರ ಪೋಲೀಸರು ಭೇಟಿ ಕೊಟ್ಟು ಪರಿಶೀಲನೆ ಕೈಗೊಂಡಿದ್ದಾರೆ. 
 

SCROLL FOR NEXT