ಸಾಂದರ್ಭಿಕ ಚಿತ್ರ 
ರಾಜ್ಯ

ನೆಗೆಟಿವ್ ಬಂದ ಮೇಲೂ ಕೋವಿಡ್-19 ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ, ಏನು ಮಾಡಬೇಕು? ವೈದ್ಯರು ಏನನ್ನುತ್ತಾರೆ?

ಕೋವಿಡ್-19 ಸಮಯದಲ್ಲಿ ರೋಗಿಯ ಅನಾರೋಗ್ಯದ ತೀವ್ರತೆಯ ಮಟ್ಟವನ್ನು ಅನುಸರಿಸಿ ಅವರು ಗುಣಮುಖರಾದ ನಂತರ ಮತ್ತೆ ಅನಾರೋಗ್ಯ ಕಂಡುಬರುವ ಸಾಧ್ಯತೆಯಿದೆ.

ಬೆಂಗಳೂರು: ಕೋವಿಡ್-19 ಸಮಯದಲ್ಲಿ ರೋಗಿಯ ಅನಾರೋಗ್ಯದ ತೀವ್ರತೆಯ ಮಟ್ಟವನ್ನು ಅನುಸರಿಸಿ ಅವರು ಗುಣಮುಖರಾದ ನಂತರ ಮತ್ತೆ ಅನಾರೋಗ್ಯ ಕಂಡುಬರುವ ಸಾಧ್ಯತೆಯಿದೆ.

ಕೋವಿಡ್-19 ಸೋಂಕು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾದ ಸುಪ್ರಿಯಾ ಸುನಿಲ್, ಆಕೆಯ ಪತಿ ಮತ್ತು ಮಗುವಿಗೆ ನಂತರ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. 

ಸುಪ್ರಿಯಾಗೆ ಮತ್ತೆ ಕೊರೋನಾ ಲಕ್ಷಣ ಕಂಡುಬಂದಿದ್ದು ವೈದ್ಯರು ಎರಡು ವಾರಗಳ ವೈದ್ಯಕೀಯ ನಿಗಾ ಸೂಚಿಸಿದ್ದಾರೆ. ನೆಗೆಟಿವ್ ಎಂದು ಬಂದರೂ ಮತ್ತೆ 20 ದಿನಗಳ ಕಾಲ ನನಗೆ ಸುಸ್ತಾಗುತ್ತಿತ್ತು. ನನ್ನ ಪತಿಗೆ ಗಂಟಲು ಕಿರಿಕಿರಿಯಾಗುತ್ತಿತ್ತು. ನನ್ನ ಮಗಳು ಮೊದಲಿನಂತಾಗಲು 10 ದಿನ ಬೇಕಾಯಿತು ಎನ್ನುತ್ತಾರೆ ಸುಪ್ರಿಯಾ.

ಸಣ್ಣ ಕೊರೋನಾ ಲಕ್ಷಣ ಇರುವವರು ಗುಣಮುಖರಾದ ಮೇಲೆ ಮತ್ತೆ ಸುಸ್ತು, ಮೈಕೈ ನೋವು, ಬಳಲಿಕೆ, ಅನಾಸಕ್ತಿಯಂತಹ ಲಕ್ಷಣಗಳನ್ನು 8-10 ದಿನ ಅನುಭವಿಸುತ್ತಿರುತ್ತಾರೆ. ಆದರೆ ಅವರಿಗೆ ಔಷಧಿಗಳು ಬೇಕಾಗುವುದಿಲ್ಲ ಎಂದು ಅಪೊಲೋ ಆಸ್ಪತ್ರೆಯ ಡಾ ರವೀಂದ್ರ ಮೆಹ್ತಾ ಹೇಳುತ್ತಾರೆ.

ಕೋವಿಡ್ ನಂತರ ನೆಗೆಟಿವ್ ವರದಿ ಬಂದ ಮೇಲೆ ಸಹ ನಾವು ಗುಣಮುಖ ಹೊಂದಿದವರ ಆರೋಗ್ಯವನ್ನು ಮತ್ತೆ ಒಂದು ತಿಂಗಳವರೆಗೆ ವಿಚಾರಿಸುತ್ತಿರುತ್ತೇವೆ. ಗಂಭೀರ ಕೋವಿಡ್-19 ಬಂದು ಗುಣಮುಖರಾದವರಲ್ಲಿ ಸುಸ್ತು, ಬಳಲಿಕೆ ಹೆಚ್ಚಿರುತ್ತದೆ. ಶ್ವಾಸಕೋಶದ ತೊಂದರೆಯಿದ್ದರೆ, ಐಸಿಯು, ವೆಂಟಿಲೇಟರ್ ನಲ್ಲಿದ್ದು ಬಂದಿದ್ದರೆ ಅಂತವರಿಗೆ ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆ ಮತ್ತೆ ಕೂಡ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಡಾ ರವೀಂದ್ರ.

ಫಾಲೋ ಅಪ್ ವೇಳೆ ರೋಗಿಯಲ್ಲಿ ಆತಂಕ, ಖಿನ್ನತೆ ಕಂಡುಬಂದರೆ ಮಾನಸಿಕ ತಜ್ಞರಲ್ಲಿ ಸಮಾಲೋಚನೆ ಪಡೆದುಕೊಳ್ಳುವಂತೆ ಸೂಚಿಸಲಾಗುತ್ತದೆ ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಡಾ ವಿವೇಕಾನಂದ ಪಡೆಗಲ್.

ಕೋವಿಡ್-19 ಗುಣಮುಖ ಹೊಂದಿ ನೆಗೆಟಿವ್ ಬಂದ ಮೇಲೆಯೂ ಒಂದು ತಿಂಗಳವರೆಗೆ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಬಾರದು, ಜಾಗೃತೆಯಾಗಿರಬೇಕು ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆಯ ಡಾ ರಂಜನ್ ಶೆಟ್ಟಿ. ವಾಕಿಂಗ್, ಯೋಗ ಮಾಡಬಹುದು, ಆದರೆ ಮೂರರಿಂದ ನಾಲ್ಕು ವಾರಗಳವರೆಗೆ ಓಡುವುದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಸಲಹೆ ನೀಡುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT