ಡಾ. ಕೆ ಸುಧಾಕರ್ 
ರಾಜ್ಯ

ಡಾ.ನಾಗೇಂದ್ರ ಆತ್ಮಹತ್ಯೆ: ನಿಮಗೆ ಯೋಗ್ಯತೆ ಇದೆಯಾ, ನೀವು ಇಲ್ಲಿಂದ ತೊಲಗಿ, ವೈದ್ಯೆಯಿಂದ ಸಚಿವ ಡಾ.ಸುಧಾಕರ್‌ಗೆ ತರಾಟೆ!

ಆರೋಗ್ಯಾಧಿಕಾರಿ ನಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿ, ವೈದ್ಯರು ಕಳೆದ ರಾತ್ರಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮೈಸೂರು: ಆರೋಗ್ಯಾಧಿಕಾರಿ ನಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿ, ವೈದ್ಯರು ಕಳೆದ ರಾತ್ರಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಪ್ರಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಆಗಮಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಳೆ ರಾತ್ರಿ ಆಗಮಿಸಿದ್ದರು.

ಈ ವೇಳೆ ಸುಧಾಕರ್ ಅವರ ವಿರುದ್ಧ ಆಕ್ರೋಶಗೊಂಡ ಮಹಿಳಾ ವೈದ್ಯರೊಬ್ಬರು, ಕೊನೆಗೂ ನಾಗೇಂದ್ರ ಅವರನ್ನು ಸಾಯಿಸಿದ್ದರಲ್ಲಾ, ಸಮಾಧಾನವಾಯಿತಾ, ನಿಮಗೆ ಯೋಗ್ಯತೆ ಇದೆಯಾ...ಛೀ...ಥೂ. ನಿಮಗೆ ಸಾಧ್ಯವಾದರೆ ನಾಗೇಂದ್ರ ಅವರನ್ನು ಬದುಕಿಸಿಕೊಡಿ, ನಿಮ್ಮ 30 ಲಕ್ಷ ಪರಿಹಾರ ಯಾರಿಗೆ ಬೇಕು, ವೈದ್ಯರೆಲ್ಲಾ ಒಂದು ತಿಂಗಳ ಸಂಬಳ ಕೊಟ್ಟರೆ  ಕೋಟಿ ರೂಪಾಯಿ ಆಗುತ್ತದೆ. ನೀವು ಇಲ್ಲಿಂದ ತೊಲಗಿ, ನನ್ನ ಮೇಲೂ ಒತ್ತಡ ಆಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ