ರಾಜ್ಯ

ಬಾದಾಮಿಯ ಐತಿಹಾಕ ಸಿಂಧೂರ ಕೆರೆ ಒಡಲಿಗೆ ಮಲಪ್ರಭೆ ನೀರು; ಜನತೆಯ ದಶಕಗಳ ಕನಸು ನನಸು

Srinivasamurthy VN

ಬಾಗಲಕೋಟೆ: ಬಾದಾಮಿ ತಾಲೂಕಿನ ಐತಿಹಾಸಿಕ ಕೆರೆಯನ್ನು ತುಂಬಿಸಬೇಕು ಎನ್ನುವ ಜಿಲ್ಲೆಯ ಜನತೆಯ ದಶಕಗಳ ಕನಸು ನನಸಾಗುವ ಕೆಲಸ ಆರಂಭಗೊಂಡಿದೆ.

ಎರಡುನೂರು ಎಕೆರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಕೆರೆ ಸಾಕಷ್ಟು ಒತ್ತುವರಿ ಆಗುವ ಜತೆಗೆ ಮುಳ್ಳಿನ ಕಂಠಿ ಬೆಳೆದು, ಹೂಳು ತುಂಬಿಕೊಂಡಿತ್ತು. ಸಾಕಷ್ಟು ಹೂಳು ತುಂಬಿ, ಬೆಳೆದ ಕಂಠಿ ಹಾಗೂ ಒತ್ತುವರಿ ತೆರವುಗೊಳಿಸುವಂತೆ ಹತ್ತಾರು ವರ್ಷಗಳಿಂದ ಪರಿಸರ ಪ್ರೇಮಿಗಳು ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದರು.

ಬಾದಾಮಿ ರೈಲು ನಿಲ್ದಾಣದಿಂದ ಮಹಾಕೂಟಕ್ಕೆ ಹೋಗುವ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಬರುವ ಕೆರೆಗೆ ಕಾಯಕಲ್ಪ ನೀಡುವ ಮನಸನ್ನು ಇದುವರೆಗೂ ಯಾವ ಜನಪ್ರತಿನಿಧಿಗಳೂ ಮಾಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಬಾದಾಮಿ ಶಾಸಕರಾಗಿ ಆಯ್ಕೆಗೊಂಡ ಬಳಿಕ ಕೆರೆಯ ಪುನರುಜ್ಜೀವನಕ್ಕೆ ಕೈ ಹಾಕಿ, ಜನತೆಯಲ್ಲಿ  ಹೊಸ ಭರವಸೆ ಮೂಡಿಸುವ ಕೆಲಸ ಮಾಡಿದರು.

ಮೊದಲ ಹಂತವಾಗಿ ಕೆರೆಯಲ್ಲಿನ ಬಹುತೇಕ ಭಾಗದಲ್ಲಿನ ಮುಳ್ಳು ಕಂಠಿ ತೇರವುಗೊಳಿಸಿ, ಕೆರೆಯಲ್ಲಿನ ಸಾಕಷ್ಟು ಪ್ರಮಾಣದ ಹೂಳನ್ನು ತೆಗೆಸಿದರು. ಕೆರೆಯಲ್ಲಿ ಇನ್ನೂ ಮುಳ್ಳು ಕಂಠಿ, ಹೂಳು ಇದ್ದರೂ ಸ್ವಚ್ಷಗೊಂಡಿರುವ ಭಾಗದಲ್ಲಾದರೂ ನೀರು ನಿಲ್ಲಿಸುವ ಕಾರ್ಯ ನಡೆಯಲಿ ಎನ್ನುವ ನಿಲುವಿಗೆ ಬದ್ದರಾದ ಸಿದ್ದರಾಮಯ್ಯ ಮಲಪ್ರಭಾ ನದಿಯ ನೀರನ್ಮು ಕಾಲುವೆ ಮೂಲಕ ಹರಿಸಿ ಕೆರೆ ತುಂಬಿಸುವ ಆರಂಭಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ಕಾಲುವೆ ಮೂಲಕ ಹರಿದು ಬರುತ್ತಿರುವ ಮಲಪ್ರಭಾ ಕೆರೆಯ ಒಡಲು ತುಂಬಿಸುತ್ತಿದ್ದಾಳೆ. 

ಕೆರೆಗೆ ನೀರು ಹರಿದು ಬರುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ರಿರುವ ಜನತೆ ಸಿದ್ದರಾಮಯ್ಯ ಅವರನ್ನು ಹರಸುತ್ರಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾಚ ಹಾಗೂ ಅವರ ಆಪ್ತ ಹೊಳೆಬಸು ಶೆಟ್ಟರ್ ಅವರ ನೇತೃತ್ವದ ತಂಡದ ಸತತ ಪ್ರಯತ್ನದಿಂದಾಗಿ ಕೆರೆ ಕೊನೆಗೂ ನೀರು ಕಾಣುತ್ತಿದ್ದು. ಪ್ರತಿ ವರ್ಷವೂ ಬಿಟ್ಟು ಬಿಡದೇ ಭರ್ತಿ ಮಾಡಿಸುವ ಕೆಲಸ ನಡೆಯಬೇಕಿದೆ. ಆ ಮೂಲಕ ಐತಿಹಾಸಿಕ ಕೆರೆಯನ್ನು ಅಭಿವೃದ್ಧಿ ಪಡಿಸಿ, ಈ ಭಾಗಕ್ಕೆ ಬರುವ ಪ್ರವಾಸಿಗರನ್ಮು ಆಕರ್ಷಿಸುವಂತೆ ಎನ್ನುವ ಜನತೆಯ ಆಶಯವನ್ನು ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ಪಡೆ ಮಾಡಬೇಕಿದೆ. ರಾಜಕೀಯ ಕಾರಣಗಳು ಏನೇ ಇರಲಿ. ಹಿಡಿದ ಕೆಲಸ ಪೂರ್ಣ ಗೊಳಿಸುವ ಇಚ್ಛಾಶಕ್ತಿಗೆ ಜನತೆ ಹ್ಯಾಟ್ಸಪ್ ಹೇಳುತ್ತಿದ್ದು, ಸಾರ್ಥಕತೆಗೆ ಸಾಕ್ಷಿಯಾಗಿ ಸಿಂಧೂರ ಕೆರೆ ನಿಲ್ಲಲಿದೆ.

ವಿಠ್ಠಲ ಆರ್. ಬಲಕುಂದಿ

SCROLL FOR NEXT