ರಾಜ್ಯ

ಶವಸಂಸ್ಕಾರ ಉಚಿತ ಎಂಬ ಆದೇಶವಿದ್ದರೂ 6,000 ಲಂಚ ಪಡೆದ ಶವಾಗಾರ ಸಿಬ್ಬಂದಿ: ಆರೋಪ

Raghavendra Adiga

ಬೆಂಗಳೂರು:  ಕೋವಿಡ್ ಸಂತ್ರಸ್ಥರು ಯಾವುದೇ ಶವ ಸಂಸ್ಕಾರಕ್ಕೆ ಶುಲ್ಕ ನೀಡಬೇಕಿಲ್ಲ ಎಂದು  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ತಿಂಗಳಷ್ಟೇ ಆದೇಶಿಸಿದೆ,  ಆದರೆ  ಭಾನುವಾರ ಕೋವಿಡ್ ಗೆ ಬಲಿಯಾಗಿದ್ದ ಮಹಿಳೆಯ ಕುಟುಂಬವು  ಅಂತಿಮ ವಿಧಿಯನ್ನು ನೆರವೇರಿಸಲು 6,000 ದಷ್ಟು ಲಂಚ ನೀಡಬೇಕಾಯಿತೆಂದು ಆರೋಪ ಕೇಳಿ ಬಂದಿದೆ.

ಮಹಿಳೆಯ ಕುಟುಂಬ ಸ್ವತಃ ದುಃಖದಲ್ಲಿದ್ದ ವೇಳೆ ವಿದ್ಯಾರಣ್ಯಪುರದ ಮೀಡಿಯಾ ಅಗ್ರಹಾರ ಶವಾಗಾರದ ಸಿಬ್ಬಂದಿ ಆಂಬ್ಯುಲೆನ್ಸ್ ಶುಲ್ಕ 4,500 ರೂ., ಶವಸಂಸ್ಕಾರಕ್ಕೆ 500 ರೂ. ಹಾಗೂ  ಎರಡು ಪಿಪಿಇ ಸೂಟ್‌ಗಳಿಗೆ 1,000 ರೂ ಎಂದು ಒಟ್ಟಾರೆ 6,000  ರೂ. ತೆಗೆದುಕೊಂಡಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದರು.

ಈ ಸಂಬಂಧ ಬಿಬಿಎಂಪಿಗೆ ಲಿಖಿತ ದೂರು ಸಲ್ಲಿಕೆಯಾಗಿದ್ದು ದೂರಿನಲ್ಲಿ, ಜೋವಿನಾ ಸ್ಮಿತ್ ತನ್ನ 86 ವರ್ಷದ ಅಜ್ಜಿಯನ್ನು ಅಂತ್ಯಸಂಸ್ಕಾರ ಮಾಡಲು ತೆರಳಿದ್ದಾಗ ತಮಗಾದ ಅನುಭವವನ್ನು ಹೇಳಿದ್ದಾರೆ. . “ನಾವು ಅಲ್ಲಿಗೆ ತಲುಪಿದಾಗ, ನಮ್ಮ ಸರದಿಗಾಗಿ 2 ಗಂಟೆಗಳ ಕಾಲ ಕಾಯುವಂತೆ ಕೇಳಲಾಯಿತು. ಇದರ ನಂತರ, ನನ್ನ ಗಂಡನನ್ನು ಶವಾಗಾರದ ಕಚೇರಿಗೆ ಕರೆಸಲಾಯಿತು. ನಾನು ಅವನನ್ನು ಅನುಸರಿಸಿ ತೆರಳುವಾಗ ಒಮ್ಮೆ ಒಬ್ಬರಿಗೆ ಮಾತ್ರ ಅವಕಾಶವಿದೆ ಎಂದು ಹೇಳಲಾಗಿತ್ತು. ಕಚೇರಿಯಲ್ಲಿ, ಅವರು ನನ್ನ ಗಂಡನಿಗೆ 6,000 ರೂ.ಪಾವತಿಸುವಂತೆ ಕೇಳಿದ್ದರು.

ನಾವು ನನ್ನ ಅಜ್ಜಿಯನ್ನು ಕಳೆದುಕೊಂಡಿದ್ದು ದುಃಖದಲ್ಲಿದ್ದೆವು. , ಆದ್ದರಿಂದ ನಮಗೆ ಹಣ ನೀಡಲು ಸಾಕಷ್ಟು ಆಸಕ್ತಿಯಿಲ್ಲ ಈ ರೀತಿ ಕೇಳುವುದರ ವಿರುದ್ಧ ಪ್ರಶ್ನಿಸುವ ಮನೋಬಲವೂ ನಮಗಿರಲಿಲ್ಲ. ನಮ್ಮ ಆಂಬ್ಯುಲೆನ್ಸ್ ಚಾಲಕ ಸಂದೀಪ್ ಅವರ ಎಲ್ಲಾ ಸಹಾಯಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ, ನಾವು ಅವನಿಗೆ 500 ರೂ.ಗಳ ಟಿಪ್ಸ್ ಸಹ ಕೊಟ್ಟಿದ್ದೇವೆ.

"ಶವಾಗಾರದ ಸಿಬ್ಬಂದಿ ನಡೆದುಕೊಂಡ  ರೀತಿಗೆ ನಾನು ತುಂಬಾ ನಿರಾಶೆಗೊಂಡಿದ್ದೇನೆ. ನಾವು  ಮೋಸ ಹೋಗಿದ್ದೇವೆಂದು ಸಹ ನಮಗೆ ಅರಿವಾಗಲಿಲ್ಲ. ಮುಗ್ಧ ನಾಗರಿಕರಿಗೆ ಈ ರೀತಿಯ ವಂಚನೆ ನಡೆದಾಗಲೂ ನಾನು ಸುಮ್ಮನಿರಲು ಸಾಧ್ಯವಿಲ್ಲ" ಅವರು ಹೇಳಿಕೊಂಡಿದ್ದಾರೆ.

ಕುಟುಂಬದ ಸದಸ್ಯರ ಸಾವಿನಂತಹ ದುಃಖದ ಸನ್ನಿವೇಶದಲ್ಲಿ ಶವಾಗಾರದ ಸಿಬ್ಬಂದಿ  ಹಣ ಗಳಿಸುವ ಅವಕಾಶಕ್ಕಾಗಿ ಕಾಯುವುದು ಸರಿಯಲ್ಲ. “ಪ್ರತಿಯೊಬ್ಬರೂ ಲಂಚ ನೀಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಆದರೆ ಇನ್ನೂ ಅವರು ಹಣವನ್ನುಕೇಳುತ್ತಿದ್ದಾರೆ. ತಮ್ಮ ಪ್ರೀತಿಪಾತ್ರರ ಅಗಲಿಕೆಯ ದುಃಖದ ನಡುವೆ ಇದು ಕೇವಲ ಹಣದ ಬಗ್ಗೆಯೋಚಿಸುವ ಸಮಯವಾಗಿಲ್ಲ.  ಆದರೆ ಅಂತಹ ಕಷ್ಟದ ಸಮಯದಲ್ಲಿ ಜನರು ಲಾಭ ಪಡೆಯುವ ಬಗ್ಗೆ ಚಿಂತನೆ ನಡೆಸುವುದು ನಿಲ್ಲಬೇಕು," ಜೋವಿನಾ ಪತ್ರಿಕೆಗೆ ಹೇಳಿದ್ದಾರೆ. 

ಕೋವಿಡ್ ಸಂತ್ರಸ್ತರಿಗೆ ಶವಾಗಾರದ ನ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂಬ ಆದೇಶ ಕುರುತು ಪ್ರಚಾರ ಮಾಡಲು ನ ಶುಲ್ಕವನ್ನು ಮನ್ನಾ ಮಾಡಲಾ

“ನಾವು ಈ ಘಟನೆ ಸಂಬಂಧ ವಿಚಾರಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕುಟುಂಬವು  ಏನನ್ನೂ ಪಾವತಿಸಬೇಕಾಗಿಲ್ಲ ಮತ್ತು ಮೇಲಾಗಿ ಸ್ಮಶಾನಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಾವು ಪ್ರೋತ್ಸಾಹಧನ ನೀಡುತ್ತೇವೆ. ಅವರು ಇನ್ನೂ ಹಣಕ್ಕಾಗಿ ಒತ್ತಾಯಿಸುತ್ತಿದ್ದರೆ, ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ”ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್  ಹೇಳಿದ್ದಾರೆ. 

SCROLL FOR NEXT