ರಾಜ್ಯ

ಮಾಧ್ಯಮಗಳ ವರದಿ ಸುಳ್ಳು; ಮುಂಡರಗಿ ವೈದ್ಯಾಧಿಕಾರಿಯ ಚಿಕಿತ್ಸಾ ವೆಚ್ಚ ಸರ್ಕಾರದ್ದೇ: ಆರೋಗ್ಯ ಇಲಾಖೆ

Srinivasamurthy VN

ಗದಗ: ಮುಂಡರಗಿ ತಾಲ್ಲೂಕು ವೈದ್ಯಾಧಿಕಾರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವು ಭರಿಸಲಿದೆ ಎಂದು ಆರೋಗ್ಯ ಇಲಾಖೆ ಮತ್ತೊಮ್ಮೆ ಸ್ಪಷ್ಟ ಪಡಿಸಿದೆ.

ಈ ಕುರಿತು ಕರ್ನಾಟಕ ಆರೋಗ್ಯ ಇಲಾಖೆ ಟ್ವೀಟ್ ಮಾಡಿದ್ದು, 'ಬೆಂಗಳೂರಿನ  ಸ್ಪರ್ಷ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಮುಂಡರಗಿಯ ತಾಲೂಕು ವೈದ್ಯಾಧಿಕಾರಿಯವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಕೆಲ ಸುದ್ದಿವಾಹಿನಿಗಳು ಸದರಿ ವೈದ್ಯಾಧಿಕಾರಿಯವರ ಚಿಕಿತ್ಸಾ  ವೆಚ್ಚವನ್ನು ಸರ್ಕಾರ ಬರಿಸುತ್ತಿಲ್ಲ ಎಂಬ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ್ದ ಗದಗ ಜಿಲ್ಲೆ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರೂ ಕೂಡ ಇದೇ ಮಾತನ್ನು ಹೇಳಿದ್ದರು. ಈ ಕುರಿತು ತಾವು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರೊಂದಿಗೆ ಮಾತನಾಡಿದ್ದು, ಅವರು ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಈಗಾಗಲೇ ಚರ್ಚೆ  ನಡೆಸಿದ್ದಾರೆ, ಸರ್ಕಾರವು ಚಿಕಿತ್ಸೆ ವೆಚ್ಚ ಪಾವತಿಸಲಿದೆ. ಸರ್ಕಾರವು ಕೊರೊನಾ ವಾರಿಯರ್ಸ್ ಜೊತೆಗೆ ಇರಲಿದೆ ಎಂದು ಹೇಳಿದ್ದರು.

SCROLL FOR NEXT