ರಾಜ್ಯ

ಗುಜರಿ ಬಸ್ ಬಳಸಿ ಶೌಚಾಲಯ ನಿರ್ಮಾಣ: ಕೆಎಸ್ ಆರ್ ಟಿಸಿಯಿಂದ ಸ್ವಚ್ಛತೆಯ ಮತ್ತೊಂದು ಹೆಜ್ಜೆ

Nagaraja AB

ಬೆಂಗಳೂರು:ಕೆ‌ಎಸ್ಆರ್‌ಟಿಸಿ‌ಯ ಅನುಪಯುಕ್ತ ಬಸ್ಸನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ಸುಸಜ್ಜಿತ "ಸ್ತ್ರೀ ‌ಶೌಚಾಲಯ"ವನ್ನು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದು ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಇದು ಕೆಎಸ್‌ಆರ್‌ಟಿಸಿಯ ಸ್ವಚ್ಛತೆ ಯತ್ತ ಮತ್ತೊಂದು‌ ಹೆಜ್ಜೆಯಾಗಿದೆ. ಬೆಂಗಳೂರು  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ ಪ್ರಾಧಿಕಾರಈ ಶೌಚಾಲಯದ  ವೆಚ್ಚವನ್ನು ಸಾಮಾಜಿಕ ಕಳಕಳಿ ( ಸಿಎಸ್‌ಆರ್ ) ಯೋಜನೆಯಡಿ ನೀಡಿದೆ.  

ಈ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ‌ ನ್ಯಾಪಕಿನ್ ವೆಂಡಿಂಗ್  ಯಂತ್ರ,  ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಾತ್ಯ ಶೌಚಾಲಯಗಳು, ವಾಷ್ ಬೇಸಿನ್ ಗಳು, ‌ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುತ್  ಅಳವಡಿಸಲಾಗಿದೆ ಎಂದು ತಿಳಿಸಿದರು.

ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ ರೂ.ವೆಚ್ಚವಾಗಿದೆ. ಮಹಿಳಾ  ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ‌ ಬಸ್ಸಿನಲ್ಲಿ  ‌ನಿರ್ಮಿಸಲಾಗಿದೆ. ನಿಗಮವು  ಹಲವು ಮಹಿಳಾ  ಸ್ನೇಹಿ‌ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಸ್ ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿನ ನಮ್ಮ‌ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ ಎಂದು ಸಚಿವರು ತಿಳಿಸಿದರು.

SCROLL FOR NEXT