ಆತ್ಮಹತ್ಯೆಗೆ ಯತ್ನಿಸಿದ್ದ ಚೇತನ್ ಹಾಗೂ ರಕ್ಷಿಸಿದ ಪೋಲೀಸ್ ತಂಡ 
ರಾಜ್ಯ

ಶಿವಮೊಗ್ಗ: ಜೋಗ್ ಫಾಲ್ಸ್‌ನಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದ ಯುವಕ, ಪೋಲೀಸರಿಂದ ರಕ್ಷಣೆ

ಆಗಸ್ಟ್ 26 ರ ಬುಧವಾರ ಬೆಂಗಳೂರಿನ ಯುವಕನೊಬ್ಬ ಜೋಗ್ ಫಾಲ್ಸ್‌ನ ಭಾಗವಾಗಿರುವ ರಾಣಿ ಜಲಪಾತದ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಾಗರ: ಆಗಸ್ಟ್ 26 ರ ಬುಧವಾರ ಬೆಂಗಳೂರಿನ ಯುವಕನೊಬ್ಬ ಜೋಗ್ ಫಾಲ್ಸ್‌ನ ಭಾಗವಾಗಿರುವ ರಾಣಿ ಜಲಪಾತದ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಂಗಳೂರಿನ ಚೇತನ್ ಕುಮಾರ್ (35) ಆತ್ಮಹತ್ಯೆಗೆ ಯತ್ನಿಸಿದ ಯುವಕ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಈತ ಎರಡು ದಿನಗಳ ಹಿಂದೆ ಜೋಗ್ ಫಾಲ್ಸ್‌ಗೆ ಬಂದಿದ್ದಾಗಿ ವರದಿಯಾಗಿದೆ.

ಬುಧವಾರ, ಚೇತನ್ ಫೆನ್ಸಿಂಗ್ ದಾಟಿ ರಾಣಿ ಫಾಲ್ಸ್ ಕಡೆಯ ನಿಷೇಧಿತ ಪ್ರದೇಶಕ್ಕೆ ಆಗಮಿಸಿದ್ದಾನೆ. ಆತ ಜಲಪಾತದ ಮೇಲೆ ತಲುಪಿ ಕಣಿವೆಯಲ್ಲಿ ಹಾರಿ ಮೊದಲು ತನ್ನ ಚೀಲವನ್ನು ಕೆಳಗೆ ಎಸೆದಿದ್ದಾನೆ. ಇದನ್ನು ಗಮೈಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದಾಗ . ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಶೆಟ್ಟಿಗಾರ್ ಸ್ಥಳಕ್ಕೆ ಆಗಮಿಸಿದ್ದಾರೆ. 

ಸತತ ಮೂರು ಗಂಟೆಗಳ ಕಾಲದ ಕಾರ್ಯಾಚರಣೆ ನಡೆಸಿ ಚೇತನ್  ನನ್ನು ಪತ್ತೆ ಮಾಡಲಾಗಿದೆ. ನಂತರ ಆತನ ಮನವೊಲಿಕೆ ಮಾಡಲಾಗಿದ್ದು ಆತ್ಮಹತ್ಯೆಗೆ ಮುಂದಾಗಿದ್ದ ಅವನನ್ನು ಮರಳಿ ಕರೆತರಲಾಗಿದೆ. ನಂತರ ಚೇತನ್ ಆರೋಗ್ಯ ತಪಾಸಣೆ ನಡೆಸಿದ ಪೋಲೀಸರು ಆತನ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT