ರಾಜ್ಯ

ಮುಂದಿನ ವರ್ಷದ ಆರಂಭದೊಳಗೆ ಕೋವಿಡ್ ಲಸಿಕೆ ಕುರಿತು ಒಳ್ಳೆಯ ಸುದ್ದಿ ಹೊಂದಿರಬೇಕು- ಡಬ್ಲ್ಯೂಎಚ್ ಒ ಮುಖ್ಯ ವಿಜ್ಞಾನಿ 

Nagaraja AB

ಬೆಂಗಳೂರು: ಮುಂದಿನ ವರ್ಷದ ಆರಂಭದೊಳಗೆ ಕೋವಿಡ್-19 ಲಸಿಕೆ ಕುರಿತು ಒಳ್ಳೆಯ ಸುದ್ದಿಗಳನ್ನು ಹೊಂದಿರಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಐಐಎಂ ಬೆಂಗಳೂರು ಆಯೋಜಿಸಿದ್ದ ಸಾರ್ವಜನಿಕ ನೀತಿ ಮತ್ತು ನಿರ್ವಹಣೆ ಕುರಿತ 15ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸೀಮಿತ ಔಷಧದಿಂದಾಗಿ ಶ್ರೀಮಂತ ರಾಷ್ಟ್ರಗಳನ್ನು ಮೂಲೆಗುಂಪು ಮಾಡದೆ ಲಸಿಕೆಯನ್ನುವಿಶ್ವದಾದ್ಯಂತ ಸಮಾನವಾಗಿ ಹಂಚಿಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದರು.

ಆದರೆ, ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿದೆ, ಏಕೆಂದರೆ ಅನೇಕ ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.ಸ್ವಂತವಾಗಿ ಅಥವಾ ಇತರ ರಾಷ್ಟ್ರಗಳ ಸಹಭಾಗಿತ್ವದೊಂದಿಗೆ ದೇಶ ಲಸಿಕೆಗಳ ತಯಾರಿಕಾ ಹಬ್ ಆಗಿದೆ. ವಯಸ್ಕರ ರೋಗನಿರೋಧಕ ಕಾರ್ಯಕ್ರಮಗಳಿಗೆ ಯೋಜನೆ ಅಗತ್ಯ ಎಂದು ತಿಳಿಸಿದರು.

ಲಸಿಕೆ ಹಂಚಿಕೆಗಾಗಿಯೇ 31 ಬಿಲಿಯನ್ ಅಮೆರಿಕನ್ ಡಾಲರ್ ಅಗತ್ಯವಿರುವುದಾಗಿ ಹೇಳಿದ ಸ್ವಾಮಿನಾಥನ್, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸ್ಥಿತಿಸ್ಥಾಪಕತ್ವ ಪ್ರಗತಿ ತಿಳಿಯುವ ಅವಕಾಶವನ್ನು ಕೋವಿಡ್-19 ನೀಡಿದೆ. ಆರೋಗ್ಯ ಎಂದರೆ ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ಅಲ್ಲ, ಅದು ಆಹಾರ, ನೈರ್ಮಲ್ಯತೆ, ನೀರು, ಮನೆ, ಮದ್ಯ ಮತ್ತು ತಂಬಾಕು ಸೇವನೆಯಿಂದಾಗಿ ದುಷ್ಟಾರಿಣಾಗಳನ್ನು ಒಳಗೊಂಡಿರುತ್ತದೆ. ಅಧಿಕಾರ ಹಂಚಿಕೆ ಇರುವಲ್ಲಿ, ಸಮುದಾಯದ ಭಾಗವಹಿಸುವಿಕೆ ಮತ್ತು ಸುಸ್ಥಿರ ಪ್ರತಿಕ್ರಿಯೆ ಇದೆ, ”ಎಂದು ಅವರು ವಿವರಿಸಿದರು.

ಸರಿಯಾದ ಸಮಯಕ್ಕೆ ಮರಣ ಪ್ರಮಾಣ ಮತ್ತು ಕಾಯಿಲೆ ಹರಡುವಿಕೆ ಸರ್ಕಾರದ ಮೊದಲ ಆದ್ಯತೆಯಾಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು, ಎಲ್ಲರಿಗೂ ಆರೋಗ್ಯ ವಿಮೆ ಒದಗಿಸಬೇಕು, ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು, ಆರೋಗ್ಯ ವ್ಯವಸ್ಥೆಯಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು ಎಂದು ಡಾ. ಸೌಮ್ಯ ಸ್ವಾಮಿನಾಥನ್  ಸಲಹೆ ನೀಡಿದರು.

SCROLL FOR NEXT