ರಾಜ್ಯ

ಡಿಜೆ ಹಳ್ಳಿ ಗಲಭೆ ಪ್ರಕರಣ: ಸೆಪ್ಟಂಬರ್ 2 ರಿಂದ ಮ್ಯಾಜಿಸ್ಟ್ರೇಟ್ ತನಿಖೆ 

Shilpa D

ಬೆಂಗಳೂರು: ಆ.11 ರಂದು ನಡೆದಿದ್ದ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆ ಪ್ರಕರಣ ಸಂಬಂಧ ಸರ್ಕಾರ ಆದೇಶಿಸಿದ್ದ ಮ್ಯಾಜಿಸ್ಪ್ರೇಟ್‌ ತನಿಖೆ ಸೆಪ್ಟಂಬರ್ 2 ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಠಾಣೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ನೇತೃತ್ವದ ತಂಡ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆ ಹಾಕಿತು. ಠಾಣಾಧಿಕಾರಿಗಳು ಮತ್ತು ತನಿಖಾ ತಂಡದ ಜತೆ ಮಾತ್ರ ಮೊದಲ ದಿನ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ನಡೆದಿದ್ದು ಸೆ.2 ರಿಂದ ಪ್ರಕರಣದ ಪೂರ್ಣಾವಧಿ ತನಿಖೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಠಾಣೆ ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಶಿವಮೂರ್ತಿ, ''ಮ್ಯಾಜಿಸ್ಪ್ರೇಟ್‌ ತನಿಖೆ ವರದಿ ನೀಡಲು ಸರಕಾರ ಮೂರು ತಿಂಗಳು ಗಡುವು ನೀಡಿದೆ. ನ್ಯಾಯಾಂಗ ತನಿಖೆ ಮಾದರಿಯಲ್ಲೇ ಮ್ಯಾಜಿಸ್ಪ್ರೇಟ್‌ ತನಿಖೆಯೂ ನಡೆಯುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಹೆಚ್‌ಆರ್‌ಸಿ) ಮಾರ್ಗಸೂಚಿಯಂತೆ ತನಿಖೆ ಪ್ರಾರಂಭಿಸಲಾಗಿದೆ.

ಗಲಭೆ ಪ್ರಕರಣ ಸಂಬಂಧ ಈವರೆಗೆ ಒಟ್ಟು 388 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಡಿಜೆ ಹಳ್ಳಿ ಠಾಣೆಯಲ್ಲಿ 55 ಹಾಗೂ ಕೆಜಿ ಹಳ್ಳಿ ಠಾಣೆಯಲ್ಲಿ 16 ಪ್ರಕರಣಗಳು ದಾಖಲಾಗಿವೆ.

SCROLL FOR NEXT