ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮೈಸೂರಿನಲ್ಲಿ 'ಕೋವಿಶೀಲ್ಡ್‌' ಲಸಿಕೆಯ 2ನೇ ಹಂತದ ಪ್ರಯೋಗ ಆರಂಭ, ಐವರಿಗೆ ಲಸಿಕೆ

ಆಕ್ಸ್‌ಫರ್ಡ್‌ ಸಂಶೋಧಿಸಿರುವ 'ಕೋವಿಶೀಲ್ಡ್‌' ಲಸಿಕೆಯ ಎರಡನೇ ಹಂತದ ಪ್ರಯೋಗ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಆರಂಭವಾಗಿದ್ದು, ಐವರು ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗಿದೆ.

ಕೋವಿಡ್ ಶಿಲ್ಡ್ ಲಸಿಕೆ
Lingaraj Badiger
Updated On : 29 Aug 2020, 1:52 pm

ಮೈಸೂರು: ಆಕ್ಸ್‌ಫರ್ಡ್‌ ಸಂಶೋಧಿಸಿರುವ 'ಕೋವಿಶೀಲ್ಡ್‌' ಲಸಿಕೆಯ ಎರಡನೇ ಹಂತದ ಪ್ರಯೋಗ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಆರಂಭವಾಗಿದ್ದು, ಐವರು ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗಿದೆ.

ಸದ್ಯ ಲಸಿಕೆ ಹಾಕಿಸಿಕೊಂಡಿರುವ ಐವರು ಸ್ವಯಂ ಸೇವಕರ ಆರೋಗ್ಯ ಸ್ಥಿರವಾಗಿದ್ದು, ಲಸಿಕೆ ಪಡೆದ ನಂತರ ಅವರಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಮತ್ತು ರಿಯಾಕ್ಷನ್ ಸಹ ಆಗಿಲ್ಲ. ಹೀಗಾಗಿ ಲಸಿಕೆ ಮತ್ತೊಂದು ಹಂತದ ಸಕ್ಸಸ್ ಕಂಡಿದೆ ಎನ್ನಬಹದು.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿ ಜೆ ಎಸ್ ಎಸ್ ಅಕಾಡೆಮಿಕ್ ನ ಸಮಕುಲಾಧಿಪತಿ ಬಿ. ಸುರೇಶ್ ಅವರು, ಕೊರೋನಾಗೆ ಕಂಡು ಹಿಡಿದ ಲಸಿಕೆಯ ಮೊದಲ ಮಾನವ ಪ್ರಯೋಗ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಜೆಎಸ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಸಿಕೆ  ಪ್ರಯೋಗ ಮಾಡಲಾಗುತ್ತಿದ್ದು ಡಿಸೆಂಬರ್ ಅಂತ್ಯಕ್ಕೆ ಪ್ರಯೋಗದ ಫಲಿತಾಂಶ ಬರಲಿದೆ ಎಂದು ತಿಳಿಸಿದ್ದಾರೆ.

Advertisement

Advertisement

ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಈ ಲಸಿಕೆ ಬಂದಿದ್ದು  ನೋಂದಾಯಿತ ಸ್ವಯಂ ಸೇವಕರ ಮೇಲೆ ಮೊದಲ ಪ್ರಯೋಗ ನಡೆಸಲಾಗುತ್ತದೆ. ಒಟ್ಟಾರೇ 250 ಜನರ ಮೇಲೆ  ಆಕ್ಸ್ ಫರ್ಡ್ ಕೋವಿಶೀಲ್ಡ್ ಲಸಿಕೆಯನ್ನ  ಪ್ರಯೋಗ ಮಾಡಲಾಗುತ್ತದೆ ಎಂದು ಬಿ. ಸುರೇಶ್  ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement