ರಾಜ್ಯ

ಸಿಸಿಬಿ ದಾಳಿ: ಇಬ್ಬರು ಡ್ರಗ್ ಮಾರಾಟಗಾರರ ಬಂಧನ, 50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ

Sumana Upadhyaya

ಬೆಂಗಳೂರು: ಡ್ರಗ್ ಜಾಲದ ವಿರುದ್ಧ ಕೇಂದ್ರ ಅಪರಾಧ ದಳ (ಸಿಸಿಬಿ)ದ ದಾಳಿ ಮುಂದುವರಿದಿದೆ. ಬುಧವಾರ ಬೆಂಗಳೂರಿನ ಸಿಸಿಬಿ ಪೊಲೀಸರು ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು 50 ಲಕ್ಷ ರೂಪಾಯಿ ಮೌಲ್ಯದ ಸಾವಿರ ಎಲ್ ಎಸ್ ಡಿ ಸ್ಟ್ರಿಪ್ಸ್ ನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿಯ ನಾರ್ಕೊಟಿಕ್ಸ್ ತಡೆ ವಿರೋಧಿ ವಿಭಾಗದ ಅಧಿಕಾರಿಗಳು ಪೊಲೀಸ್ ಇನ್ಸ್ ಪೆಕ್ಟರ್ ವಿರುಪಾಕ್ಷ ನೇತೃತ್ವದಲ್ಲಿ ದಾಳಿ ನಡೆಸಿದ್ದು ಮತ್ತೊಂದು ಡ್ರಗ್ ಸಂಗ್ರಹಣೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಹಾಗೂ 50 ಲಕ್ಷ ರೂಪಾಯಿ ಮೌಲ್ಯದ ಸಾವಿರ ಎಲ್ ಎಸ್ ಡಿ ಸ್ಟ್ರಿಪ್ಸ್ ನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT