ರಾಜ್ಯ

ಮಕರ ಸಂಕ್ರಾಂತಿಯ ನಂತರ ಶಿರೂರು ಮಠದ ಉತ್ತರಾಧಿಕಾರಿ ಘೋಷಣೆ: ಸೋದೆ ಶ್ರೀ ವಿಶ್ವವಲ್ಲಭ ಸ್ವಾಮೀಜಿ

Raghavendra Adiga

ಉಡುಪಿ: ಶಿರೂರು ಮಠದ ಉತ್ತರಾಧಿಕಾರಿ ಆಯ್ಕೆ ಮಾಡಲಾಗಿದ್ದು ಮಕರ ಸಂಕ್ರಮಣದ ನಂತರ ಉತ್ತರಾಯಣದಲ್ಲಿ ಮಠದ ಪೀಠಕ್ಕೆ ನೇಮಕ ಮಾಡಲು ನಿರ್ಧರಿಸಿದ್ದೇವೆ.ಎಂದು ಪ್ರಸ್ತುತ ಶಿರೂರು ಮಠದ ಆಡಳಿತ ನೋಡಿಕೊಳ್ಳುತ್ತಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

"ಅಷ್ಠ ಮಠಾಧೀಷರ ಸಹಕಾರದೊಂದಿಗೆ ನಾವು ಇಲ್ಲಿಯವರೆಗೆ ಕರ್ತವ್ಯಗಳನ್ನು ನಿರ್ವಹಿಸಿದ್ದೇವೆ. ಭವಿಷ್ಯದಲ್ಲಿಯೂ ಭಕ್ತರ ಸಹಕಾರವನ್ನು ನಾವು ನಿರೀಕ್ಷಿಸುತ್ತೇವೆ"  ಸ್ವಾಮೀಜಿ ಹೇಳಿದರು.

ಡಿಸೆಂಬರ್ 5 ರ ಶನಿವಾರ ಶಿರೂರು ಮಠದಲ್ಲಿ ಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. "ಲಕ್ಷ್ಮಿವರ ತೀರ್ಥ ಶ್ರೀಪಾದರು ಈಗಾಗಲೇ ಶಿರೂರು ಮೂಲ ಮಠ ಹಾಗೂ ಉಡುಪಿ ನಿವಾಸಗಳ ನವೀಕರಣ ಮತ್ತು ಆಚರಣೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ. ಮಠದ ಪ್ರಧಾನ ದೇವತೆಯನ್ನು ಗ್ರಾಮಸ್ಥರೆಲ್ಲರ ಸಹಕಾರದಲ್ಲಿ ಹೊಸ ದೇವಾಲಯದಲ್ಲಿ ಸ್ಥಾಪನೆಗೆ ನಿರ್ಧರಿಸಲಾಗಿದೆ. . ಇದಲ್ಲದೆ, ಕೀಲೂರುರು ಮೂಲಮಠದ ಬಳಿಯಿರುವ ದುರ್ಗಾಪರಮೇಶ್ವರಿ ದೇವತೆಯಸ್ಥಾನವನ್ನು ಸಹ ಗ್ರಾಮಸ್ಥರ ಸಹಾಯದಿಂದ ನವೀಕರಿಸಲಾಗಿದೆ. ಹಿರಿಯಡ್ಕ  ಸಮೀಪದ ಪಾಪಾಜೆ ಮಠ ದುರ್ಬಲಗೊಂಡಿರುವುದರಿಂದ ಅದನ್ನು ನವೀಕರಿಸಲು ನಿರ್ಧರಿಸಲಾಗಿದೆ. "ಎಂದು ಶ್ರೀಗಳು ವಿವರಿಸಿದರು.

"ಶಿರೂರು ಮಠದ ಉತ್ತರಾಧಿಕಾರಿಗಳು ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಮಕರ ಸಂಕ್ರಾಂತಿಯ ನಂತರ ಉತ್ತರಾಯಣದಲ್ಲಿ ಉತ್ತರಾಧಿಕಾರಿ  ಘೋಷಣೆಯಾಗಲಿದೆ. ಇದಕ್ಕಾಗಿ ಆಗಲೇ ಯೋಗ್ಯ ವಟುವಿನ ಆಯ್ಕೆಯಾಗಿದ್ದು ತರಬೇತಿ ನೀಡಲಾಗುತ್ತಿದೆ. ಮುಂದಿನ ವರ್ಷದಲ್ಲಿ ಅವರ ಪಟ್ಟಾಭಿಷೇಕ  ನೆರವೇರಲಿದೆ"

“ಎರಡು ವರ್ಷಗಳ ನಂತರ ಪ್ರತಿಯೊಂದು ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುತ್ತವೆ. ಒಳ್ಳೆಯ ದಿನಗಳು ಬರಲಿವೆ ಮತ್ತು ಶೀಘ್ರದಲ್ಲೇ ಶಿರೂರು ಮಠಕ್ಕೆ ಉತ್ತಮ ಉತ್ತರಾಧಿಕಾರಿ ಬರಲಿದ್ದಾರೆ. ಅವರು ವೇದವಿದ್ಯೆ ಕಲಿಯುತ್ತಿದ್ದು. ಇಡೀ ಸಮಾಜ ಅವರನ್ನು ಸ್ವಾಗತಿಸುತ್ತದೆ." ಎಂದು ಪಲಿಮಾರು ಮಠದ ರು ಸ್ವಾಮೀಜಿ ಶ್ರೀ ವಿದ್ಯಾಧೀಷತೀರ್ಥ ಹೇಳಿದ್ದಾರೆ.

ಶಿರೂರು ಮಠದ  ಶ್ರೀಗಳಾದ ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೃಷ್ಣೈಕ್ಯರಾದ ನಂತರ ಜುಲೈ 19, 2018ರಿಂದ ಪೀಠವು ಖಾಲಿಯಾಗಿತ್ತು.

SCROLL FOR NEXT