ಸಾಂದರ್ಭಿಕ ಚಿತ್ರ 
ರಾಜ್ಯ

9 ತಿಂಗಳ ನಂತರ ಬೆಂಗಳೂರು ಮನೆಗೆ ಮರಳಿದ 83 ವರ್ಷದ ವೃದ್ಧೆ

ಬೆಂಗಳೂರಿನಲ್ಲಿ ತನ್ನ ಮೊಮ್ಮಕ್ಕಳ ಜೊತೆ ವಾಸವಿದ್ದ 83 ವರ್ಷದ ವೃದ್ಧ ವಿಧವೆ ತನ್ನ ವೃದ್ದಾಪ್ಯ ವೇತನ ಸಂಗ್ರಹಿಸಲು ತಮಿಳುನಾಡಿಗೆ ತೆರಳಲು ರೈಲು ಹತ್ತಿದ್ದರು.

ರಾಯ್ ಪುರ: ಬೆಂಗಳೂರಿನಲ್ಲಿ ತನ್ನ ಮೊಮ್ಮಕ್ಕಳ ಜೊತೆ ವಾಸವಿದ್ದ 83 ವರ್ಷದ ವೃದ್ಧ ವಿಧವೆ ತನ್ನ ವೃದ್ದಾಪ್ಯ ವೇತನ ಸಂಗ್ರಹಿಸಲು ತಮಿಳುನಾಡಿಗೆ ತೆರಳಲು ರೈಲು ಹತ್ತಿದ್ದರು.

ಆದರೆ ಆಕಸ್ಮಿಕವಾಗಿ 83 ವರ್ಷದ ಪುಪಟ್ಟಿ ಅಮ್ಮ ವಿಶಾಖಪಟ್ಟಣಂಗೆ ತೆರಳುವ ರೈಲಿನಲ್ಲಿ ಹತ್ತಿದರು. ವೈಜಾಗ್ ತಲುಪಿದಾಗ, ಅದು ಗೊತ್ತಾಗಿ ವಾಪಸ್ ಬರಕಲು ನಿರ್ಧರಿಸಿದರು. ಹೀಗಾಗಿ ಬಸ್ತಾರ್ ಗೆ ತೆರಳುವ ರೈಲು ಹತ್ತುವ ಬದಲು ಛತ್ತೀಸ್ ಗಡ ಟ್ರೈನ್ ನಲ್ಲಿ ಕುಳಿತಿದ್ದರು.

ಲಾಕ್ ಡೌನ್ ಗೆ ಮೊದಲು ಈ ಘಟನೆ ನಡೆದಿತ್ತು, ಜಗದಲಪುರದ ರೆಡ್‌ಕ್ರಾಸ್ ಸೊಸೈಟಿಯ ಸ್ವಯಂ ಸೇವಕರು ಪುಪಟ್ಟಿ ಅಮ್ಮ ರೋಮಿಂಗ್ ಮಾಡುತ್ತಿರುವುದು ಕಂಡುಬಂದಿದೆ.

ಆರಂಭದಲ್ಲಿ ಅವರು ಇಲ್ಲಿಗೆ ಹೇಗೆ ತಲುಪಿದರು ಎಂದು ನಮಗೆ ತಿಳಿಸಲು ಸಾಧ್ಯವಾಗಲಿಲ್ಲ, ಏಕೆಂದರೇ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದರು. ಭಾಷಾಂತರಕಾರರ ಮೂಲಕ ನಾವು ಆಕೆ ಮಾತನಾಡುವುದನ್ನು ತಿಳಿದುಕೊಂಡು ವೃದ್ಧಾಶ್ರಮಕ್ಕೆ ತಲುಪಿಸಿದೆವು ಎಂದು ಜಿಲ್ಲಾಧಿಕಾರಿ ರಜತ್ ಬನ್ಸಾಲ್ ತಿಳಿಸಿದ್ದಾರೆ.

ಆಕೆ ಬಸ್ತಾರ್ ನಲ್ಲಿದ್ದಾಗಲೇ ಲಾಕ್ ಡೌನ್ ಘೋಷಣೆಯಾಯಿತು. ಆದರೆ ಬೇರೆಯವರ ಜೊತೆ ಮಾತನಾಡಲು ಅವರಿಗೆ ಸಾಧ್ಯವಾಗಲಿಲ್ಲ, ಕಣ್ಣೀರು ಹಾಕುವುದನ್ನು ಬಿಟ್ಟರೆ ಅಮ್ಮನಿಗೆ ಬೇರೆಯವರ ಜೊತೆ ಸಂವಹನ ಮಾಡುತ್ತಿರಲಿಲ್ಲ, ಆದರೆ ನಿಧಾನವಾಗಿ ಆ ವಾತಾವರಣಕ್ಕೆ ಹೊಂದಿಕೊಂಡರು.

ನಾವು ಆಕೆಯ ಮೊಮ್ಮಗ ಸೆಂಥಿಲ್ ಜೊತೆ ಮಾತನಾಡಿದೆವು, ಆಕೆ ಚಂಡೀಗಡ ತಲುಪಿರುವುದನ್ನು ಕೇಳಿ ಆತನಿಗೆ ಆಘಾತವಾಯಿತು ಎಂದು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಅಲೆಕ್ಸಾಂಡರ್ ತಿಳಿಸಿದ್ದಾರೆ. ಆಕೆ ಸುರಕ್ಷಿತವಾಗಿ ಮನೆಗೆ ಮರಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT