ಸಾರಿಗೆ ಸಚಿವ ಲಕ್ಷ್ಮಣ್ ಸವದಿ 
ರಾಜ್ಯ

ನಾಳೆಯಿಂದ ಖಾಸಗಿ ವಾಹನಗಳ ವ್ಯವಸ್ಥೆ: ಸಚಿವ ಲಕ್ಷ್ಮಣ್ ಸವದಿ

ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ನಾಳೆಯಿಂದ ಖಾಸಗಿ ವಾಹನಗಳನ್ನು ಬಳಸಿಕೊಂಡು ಸೇವೆ ನೀಡಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರು: ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ನಾಳೆಯಿಂದ ಖಾಸಗಿ ವಾಹನಗಳನ್ನು ಬಳಸಿಕೊಂಡು ಸೇವೆ ನೀಡಲು ಸರ್ಕಾರ ನಿರ್ಧರಿಸಿದೆ.

ನಗರದಲ್ಲಿಂದು ಸುದ್ಗಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಲಕ್ಷ್ಮಣ್ ಸವದಿ,  ಸರ್ಕಾರಿ ದರದಲ್ಲೇ ಖಾಸಗಿ ವಾಹನಗಳನ್ನು ಓಡಿಸುತ್ತೇವೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದರು.

ನಿಮ್ಮ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸುತ್ತೇವೆ, ಧರಣಿ ಕೈ ಬಿಟ್ಟು ಮಾತುಕತೆಗೆ ಬನ್ನಿ ಎಂದು ಮುಷ್ಕರ ನಿರತ ಸಾರಿಗೆ ನೌಕರರಿಗೆ ಮನವಿ ಮಾಡಿಕೊಂಡ ಸಚಿವರು, ಸಿಬ್ಬಂದಿ ಜೊತೆಗೆ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿದ್ಧರಿದ್ದೇವೆ ಎಂದರು.

ಇಲಾಖೆ ಸಿಬ್ಬಂದಿ ಜೊತೆಗೆ ಮಾತುಕತೆಗೆ ಸಿದ್ಧ, ಆದರೆ, ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೆ ಮಾತುಕತೆ ನಡೆಸುವುದಿಲ್ಲ, ಪರ್ಯಾಯವಾಗಿ ಖಾಸಗಿ ಬಸ್ ಗಳಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ: ಬೆಳಗ್ಗೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ; ಮೇ 13ಕ್ಕೆ ಬಹುಮತ ಸಾಬೀತು

ಕೇರಳದಲ್ಲಿ ಸಿಎಂ ಆಯ್ಕೆ ಕಗ್ಗಂಟು: ಮೂವರು ಘಟಾನುಘಟಿಗಳ ನೇರ ಹಣಾಹಣಿ, ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್!

ಕಾಂಗ್ರೆಸ್‌ನಿಂದ ದ್ರೋಹ, ಸೌಜನ್ಯಕ್ಕಾದರೂ ಧನ್ಯವಾದ ಹೇಳಲಿಲ್ಲ: ಎಂ.ಕೆ ಸ್ಟಾಲಿನ್ ಕಿಡಿ

ಅಸಾಧ್ಯವನ್ನು ಸಾಧ್ಯವಾಗಿಸಿದರು; ದಕ್ಷಿಣದಲ್ಲಿ BJP ನೆಲೆಯೂರುವಂತೆ ಮಾಡಿದ್ದೇ ಯಡಿಯೂರಪ್ಪ: ಅಮಿತ್ ಶಾ; Video

120 ಶಾಸಕರ ಬಲ ಸಿಗುತ್ತಿದ್ದಂತೆ ರಾಜ್ಯಪಾಲರ ಭೇಟಿ: ಸರ್ಕಾರ ರಚನೆಗೆ 'ಸರ್ಕಾರ್' ಹಕ್ಕು ಮಂಡನೆ; ನಾಳೆ ವಿಜಯ್ ಪ್ರಮಾಣವಚನ?

SCROLL FOR NEXT