ರಾಜ್ಯ

ರೈತರು ನಿಜ ಗೋರಕ್ಷಕರು, ಗೋಹತ್ಯೆ ಮಸೂದೆಯಿಂದ ರೈತರ ಆದಾಯಕ್ಕೆ ಬರೆ: ರೈತಸಂಘದ ಮುಖಂಡರು

Raghavendra Adiga

ಮೈಸೂರು: ರಾಜ್ಯದ ಗೋಹತ್ಯೆ ನಿಷೇಧ ಮಸೂದೆಯನ್ನು ರೈತ ವಿರೋಧಿ ಎಂದು ಹೇಳಿರುವ ಕರ್ನಾಟಕ ರಾಜ್ಯ ರೈತಸಂಘ ಈ ಮಸೂದೆ ಕೃಷಿಕರ ಆದಾಯಕ್ಕೆ ಬರೆ ಹಾಕುತ್ತದೆ ಎಂದಿದೆ. ಏಕೆಂದರೆ ಈ ಮಸೂದೆಯಂತೆ ವಯಸ್ಸಾದ, ಅನುತ್ಪಾದಕವಾದ ಹಸುಗಳನ್ನು ಕೊಲ್ಲುವಂತಿಲ್ಲ ಹಾಗಾಗಿ ಅಂತಹಾ ಹಸುಗಳ ನಿರ್ವಹಣೆ ರೈತರಿಗೆ ಹೊರೆಯಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

“ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಒತ್ತಾಯಿಸುವವರು ರೈತರಲ್ಲ. ಹಸುಗಳನ್ನು ಸಾಕುವ ಕಷ್ಟ ರೈತರಿಗೆ ಮಾತ್ರ ತಿಳಿದಿದೆ. ನಮಗೂ ಅವರ ಬಗ್ಗೆ ಕಾಳಜಿ ಇದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ, ಅನುತ್ಪಾದಕ ಹಸುಗಳನ್ನು ನಿರ್ವಹಿಸುವುದು ಕಷ್ಟ, ಮತ್ತು ಹೊಸ ಕಾನೂನಿನಿಂದ ರೈತರಿಗೆ ಅವುಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ”ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಹೆಚ್ಚಿನ ರೈತರು ಬೆರಳೆಣಿಕೆಯಷ್ಟು ಜಾನುವಾರುಗಳನ್ನು ಮಾತ್ರ ಸಾಕುತ್ತಾರೆ, ಏಕೆಂದರೆ ಅವುಗಳನ್ನು ನಿರ್ವಹಿಸುವುದು ದುಬಾರಿಯಾಗಿದೆ. ಈ ಮಸೂದೆಯು ಗೋರಕ್ಷಕರಿಗೆ, ರೈತರಿಗೆ ಕಿರುಕುಳ ನೀಡುವುದಕ್ಕೆ ಒಂದು ಕಾರಣವಾಗಬಹುದು ಎಂಬ ಆತಂಕವಿದೆ. “ರೈತರು ನಿಜವಾದ ಗೋರಕ್ಷಕರು. ಯಾವುದೇ ಜಾಹೃತ ಗುಂಪುಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ನಾವು ಬಯಸುವುದಿಲ್ಲ, ”ಎಂದು ಅವರು ಹೇಳಿದರು.

"ದೆಹಲಿಯ ಹೊರಗೆ ಅಷ್ಟೊಂದು ಸಂಖ್ಯೆಯ ರೈತರು ಹೋರಾಟ ನಡೆಸಿದ್ದರೂ ಕೇಂದ್ರ ಸರ್ಕಾರ ಕಾನೂನನ್ನು ಹಿಂತೆಗೆದುಕೊಳ್ಳಲು ನಿರಾಕರಿಸುತ್ತಿರುವುದು ಅಸಂಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. 

ರಾಜ್ಯದ ಕೃಷಿ ಮಸೂದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ರೈತರು ಡಿಸೆಂಬರ್ 16 ರಿಂದ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು. ಸಂವಾದದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಅಲಗೂಡು ಶಿವಕುಮಾರ್ಈ ಮಸೂದೆ ಚರ್ಮದ ಚೀಲ  ತಯಾರಿಕೆಯಲ್ಲಿ ತೊಡಗಿರುವವರು ಸೇರಿದಂತೆ ಅನೇಕರ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಇದಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ. 
 

SCROLL FOR NEXT