ರಾಜ್ಯ

ಈ ಗ್ರಾಮದಲ್ಲಿ ಒಬ್ಬನೇ ಒಬ್ಬ ಎಸ್ ಟಿ ಅಭ್ಯರ್ಥಿ ಇಲ್ಲ: 25 ವರ್ಷದಿಂದ ನಡೆದಿಲ್ಲ ಚುನಾವಣೆ, ಸಿಕ್ಕಿಲ್ಲ ಯಾವುದೇ ಅನುದಾನ!

Shilpa D

ಕಾರವಾರ: ಮೀಸಲಾತಿಯಿಂದ ಹಿಂದುಳಿದ ವರ್ಗಗಳ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಭಾವಿಸಿರಬಹುದು, ಆದರೆ ಕಾರವಾರ ಹೊರವಲಯದಲ್ಲಿರುವ ಕಿನ್ನಾರ ಗ್ರಾಮ ವಿಶೇಷವಾಗಿದೆ.

ಎಸ್‌ಟಿ ಸಮುದಾಯಕ್ಕಾಗಿ ಕಾಯ್ದಿರಿಸಲಾಗಿರುವ ಒಂದು ವಾರ್ಡ್ ನಲ್ಲಿ ಕಳೆದ 25 ವರ್ಷಗಳಿಂದ ಚುನಾವಣೆ ನಡೆದಿಲ್ಲ, ಏಕೆಂದರೇ ಈ ಗ್ರಾಮದಲ್ಲಿ ಎಸ್‌ಟಿ ಸದಸ್ಯರಿಲ್ಲದಿರುವುದು ಇದಕ್ಕೆ ಕಾರಣ.

ಪರಿಣಾಮವಾಗಿ, ಈ ಗ್ರಾಮವು ಸರ್ಕಾರದ ಅನುದಾನವನ್ನು ಕಳೆದುಕೊಳ್ಳುತ್ತಿದೆ. ಈ ಮೊದಲು ಎಸ್‌ಟಿ ಮೀಸಲಾತಿ ಬೋರಿಬಾಗ್ ವಾರ್ಡ್‌ಗೆ ಇತ್ತು ಮತ್ತು ಈಗ ಅದನ್ನು ಘಡ್ಸಾಯಿ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಯಾವುದೇ ಅಭ್ಯರ್ಥಿಗಳು ಇಲ್ಲದ ಕಾರಣ ಈ ಸ್ಥಾನ ಖಾಲಿ ಇದೆ. ಪಂಚಾಯತ್ ಸದಸ್ಯರ ಬಲವನ್ನು ಆಧರಿಸಿ ಮೀಸಲಾತಿ ನಿರ್ಧರಿಸಲಾಗುತ್ತದೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಮೀಸಲಾತಿ ಕಡ್ಡಾಯವಾಗಿರುವುದರಿಂದ, ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿತ್ತು. ಎಸ್‌ಸಿ ಮತ್ತು ಎಸ್‌ಟಿಗಳಿಗೆ ಸೀಟುಗಳನ್ನು ಕಾಯ್ದಿರಿಸಲಾಗಿದೆ, ಆದರೆ ಯಾವುದೇ ಅಭ್ಯರ್ಥಿಗಳು ಇರಲಿಲ್ಲ.

ಆದರೆ, ಕಳೆದ ಬಾರಿ ನಮ್ಮ ಹಳ್ಳಿಯ ಇಬ್ಬರು ಪರಿಶಿಷ್ಟ ಜಾತಿ ಹುಡುಗಿಯರನ್ನು ಮದುವೆಯಾದರು. ಆದರೆ ಎಸ್‌ಟಿ ವಿಷಯದಲ್ಲಿ ಇದು ಒಂದೇ ಆಗಿಲ್ಲ ಎಂದು ಗ್ರಾಮಸ್ಥ ರವಿ ಕಾಸ್ಬೆಕರ್ ಹೇಳಿದ್ದಾರೆ.

ಕಳೆದ ಬಾರಿ ಇಲ್ಲಿಂದ ಎಸ್‌ಸಿ ಕೋಟಾ ಅಡಿಯಲ್ಲಿ ಚಂದ್ರಕಲಾ ಕೋಟೆಕರ್ ಮತ್ತು ಜ್ಯೋತಿ ಸಂದೀಪ್ ಗೋಯೇಕರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮತ್ತು ಗ್ರಾಮಸ್ಥರ ಪ್ರಕಾರ, ಅವರನ್ನು ಮತ್ತೆ ಆಯ್ಕೆ ಮಾಡಲಾಗುತ್ತದೆ. ಏಕೆಂದರೆ ನಿಯಮಗಳ ಪ್ರಕಾರ, ಯಾವುದೇ ಹೊರಗಿನವರು ಮೀಸಲಾತಿ ಅಡಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.

ಹೊರಗಿನಿಂದ ಬಂದ ಜನರು ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಕಿನ್ನಾರ ಗ್ರಾಮದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರಿಂದರ್ ಪಾಟ್ಖರ್ ಹೇಳಿದ್ದಾರೆ.

ಹಂಚಿಕೆಯಾದ ಒಟ್ಟು ಅನುದಾನದಲ್ಲಿ ಕನಿಷ್ಠ 22.75 ಶೇಕಡಾವನ್ನು ಎಸ್‌ಸಿ / ಎಸ್‌ಟಿ ಸಮುದಾಯಗಳಿಗೆ ಮೀಸಲಿಡಲಾಗಿದೆ.  ಈ ಮೊದಲು ನಾವು ಎಸ್‌ಟಿ ಸಮುದಾಯಕ್ಕಾಗಿ 6 ಲಕ್ಷ ರೂ. ಈಗ, ನಾವು 13 ಲಕ್ಷ ರೂ. ಹಿಂದಿರುಗಿಸಲಿದ್ದೇವೆ ಎಂದು ಕಿನ್ನಾರ ಗ್ರಾಮದ ಪಿಡಿಒ ಮಧುರಾ ನಾಯಕ್ ತಿಳಿಸಿದ್ದಾರೆ. ಈ ವಿಷಯವನ್ನು ಉತ್ತರ ಕನ್ನಡದ ಜಿಲ್ಲಾಧಿಕಾರಿ ಕೆ.ಹರೀಶ್ ಕುಮಾರ್  ಅವರ ಗಮನಕ್ಕೆ ತರಲಾಗಿದೆ,  ಇದು ಸರ್ಕಾರದ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ್ದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT