ರಾಜ್ಯ

ವಿಸ್ಟ್ರಾನ್ ಘಟಕ ಧ್ವಂಸ ಪ್ರಕರಣ: ಕುಂದುಕೊರತೆ ಹೇಳಿಕೊಳ್ಳಲು ಸೃಷ್ಟಿಸಿದ್ದ ವೇದಿಕೆ ಬಳಸಿದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ!

Manjula VN

ಕೋಲಾರ: ನೌಕರರು ಕುಂದುಕೊರತೆ ಹೇಳಿಕೊಳ್ಳುವ ಸಲುವಾಗಿ ಸೃಷ್ಟಿಸಲಾಗಿದ್ದ ವೇದಿಕೆಯೊಂದನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದೇ ಆದರೆ, ವಿಸ್ಟ್ರಾನ್ ಐಫೋನ್ ತಯಾರಿಕಾ ಘಟಕದ ಮೇಲಿನ ದಾಳಿಯನ್ನು ತಪ್ಪಿಸಬಹುದಿತ್ತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಾಪ್ ನಲ್ಲಿ ಕೋಲಾರ ಡಿಸ್ಟ್ರಿಕ್ಟ್ ಇಂಡಸ್ಟ್ರೀಸ್ ಗ್ರೂಪ್ ಎಂದು ಕೋಲಾರ ಜಿಲ್ಲಾ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಸೃಷ್ಟಿಸಿದ್ದರು. ಈ ಗ್ರೂಪ್ ನಲ್ಲಿ ವಿಸ್ಟ್ರಾನ್ ಕಾರ್ಪೊರೇಷನ್'ನ ಅಧಿಕಾರಿಗಳೂ ಇದ್ದರು ಎಂದು ತಿಳಿದುಬಂದಿದೆ. 

ಸಂಸ್ಥೆಯಲ್ಲಿ ನೌಕರರು ಸಮಸ್ಯೆ ಎದುರುತ್ತಿದ್ದರೂ ಕೂಡ ವಾಟ್ಸಾಪ್ ಗ್ರೂಪ್ ರಚನೆಗೊಂಡು ಸಾಕಷ್ಟು ಕಾಲವಾದರೂ ವಿಸ್ಟ್ರಾನ್ ಗ್ರೂಪ್'ನ ಅಧಿಕಾರಿಗಳು ಒಂದು ಪೋಸ್ಟನ್ನೂ ಮಾಡಿರಲಿಲ್ಲ. ಒಂದು ಅಧಿಕಾರಿಗಳು ಗ್ರೂಪ್ ಮೂಲಕ ನೌಕರರನ್ನು ಸಂಪರ್ಕಿರುವ ಪ್ರಯತ್ನಗಳನ್ನು ಮಾಡಿ, ಕುಂದುಕೊರತೆಗಳನ್ನು ಆಲಿಸಿದ್ದೇ ಆದರೆ, ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಹಿಂದೆ ನೌಕರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಪ ಆಯುಕ್ತರು ಸಮಸ್ಯೆ ಬಗ್ಗೆ ಗಮನಹರಿಸಿ ಪರಿಹರಿಸಿದ್ದರು. 

ನೌಕರರು ನೀರು ಹಾಗೂ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ವೇಳೆ ಉಪ ಆಯುಕ್ತ ಸತ್ಯಭಾಮಾ ಅವರು, ಗಮನ ಹರಿಸಿ ಸಮಸ್ಯೆ ಬಗೆಹರಿಸಿದ್ದರು. ಜಿಲ್ಲೆಯಾದ್ಯಂತದ ಎಲ್ಲಾ ಕೈಗಾರಿಕೆಗಳ ಹಿತಾಸಕ್ತಿಗಳ ಗಮನಹರಿಸಿ ಸಮಸ್ಯೆ ಪರಿಹರಿಸುವ ಸಲುವಾಗಿ ರಚನೆ ಮಾಡಲಾಗಿತ್ತು. ಘಟನೆ ಬಗ್ಗೆ ಸೂಕ್ತ ರೀತಿಯ ತನಿಖೆಯ ಅಗತ್ಯವಿದೆ ಎಂದು ನೌಕರರೊಬ್ಬರು ಹೇಳಿದ್ದಾರೆ. 

SCROLL FOR NEXT