ರಾಜ್ಯ

ಬೆಂಗಳೂರಿನ ಶ್ರವಣ್ ರೆಗ್ರೆಟ್ ಐಯ್ಯರ್ ಗೆ ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ 2021ನೇ ಸಾಲಿನ ಛಾಯಾಚಿತ್ರ ಪ್ರಶಸ್ತಿ!

Sumana Upadhyaya

ಬೆಂಗಳೂರು: ಚಿತ್ರ ನಿರ್ದೇಶಕ ಮತ್ತು ಛಾಯಾಗ್ರಾಹಕ ಶ್ರವಣ್ ರೆಗ್ರೆಟ್ ಐಯ್ಯರ್ ಗೆ ಪ್ರಶಸ್ತಿಗಳೇನು ಹೊಸದಲ್ಲ. ಆದರೆ ತೀರಾ ಇತ್ತೀಚೆಗೆ ಅವರಿಗೆ ಸಿಕ್ಕಿದ ವಿಶ್ವಸಂಸ್ಥೆ ವಿಶ್ವ ಹವಾಮಾನ ಸಂಸ್ಥೆ 2021ನೇ ಪ್ರಶಸ್ತಿ ಅವರಿಗೆ ವಿಶೇಷ.

ಮಾಜಿ ಪತ್ರಕರ್ತ ಮತ್ತು ಸಾಕ್ಷ್ಯಚಿತ್ರ ತಯಾರಕ ಬೆಂಗಳೂರು ಮೂಲದ ಶ್ರವಣ ರೆಗ್ರೆಟ್ ಐಯ್ಯರ್, ಮಡಕಾಸ್ಕರ್ ನ ಮೊರೊಂಡವಾದಲ್ಲಿ ವಿಶೇಷ ಹವಾಮಾನ ಸನ್ನಿವೇಶವನ್ನು ಕ್ಯಾಮರಾದಲ್ಲಿ ಹಿಡಿದಿದ್ದರು. ಮಳೆ ಬರುವಾಗ ಸೆರೆ ಹಿಡಿದ ಚಿತ್ರ ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆಯ 2021ನೇ ಕ್ಯಾಲೆಂಡರ್ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಪ್ರವೇಶವಾಯಿತು. ಹವಾಮಾನ, ನೀರು, ಸಮುದ್ರ ಹೀಗೆ ಸಾವಿರಕ್ಕೂ ಹೆಚ್ಚು ಫೋಟೋಗಳು ಅವರಿಗೆ ಬಂದಿದ್ದವು. ಜ್ಯೂರಿ 13 ಮಂದಿ ವಿಜಯಶಾಲಿಗಳನ್ನು ಆಯ್ಕೆ ಮಾಡಿದ್ದು ಅವರಲ್ಲಿ ರಿಗ್ರೆಟ್ ಒಬ್ಬರು.

ಅವರ ತಂದೆ ರೆಗ್ರೆಟ್ ಅಯ್ಯರ್, ಛಾಯಾಗ್ರಾಹಕ ಮತ್ತು ಪತ್ರಕರ್ತ ಕೂಡ. ಮಾನವ ಆಸಕ್ತಿಯ ಕಥೆಗಳನ್ನು ನೋಡಲು ಮತ್ತು ಸೆರೆಹಿಡಿಯಲು ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ತರಬೇತಿ ನೀಡಿದರು. ಕಳೆದ 15 ವರ್ಷಗಳಲ್ಲಿ - ನನ್ನ ಮೊದಲ ಛಾಯಾಚಿತ್ರವನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಗಿನಿಂದ - ಪ್ರಪಂಚದ ಕೆಲವು ದೂರದ ಮೂಲೆಗಳಿಗೆ ಪ್ರಯಾಣಿಸಲು ಮತ್ತು ಆಸಕ್ತಿದಾಯಕ ಕಥೆಗಳನ್ನು ದಾಖಲಿಸಲು ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇನೆ ಎಂದು ಶ್ರವಣ್ ಖುಷಿಪಡುತ್ತಾರೆ. 

SCROLL FOR NEXT