ನಂದಿ ಬೆಟ್ಟ 
ರಾಜ್ಯ

ಕ್ರಿಸ್‌ಮಸ್ ಸರ್ಪ್ರೈಜ್! ಡಿಸೆಂಬರ್ 24 ರಿಂದ ನಂದಿ ಬೆಟ್ಟದಲ್ಲಿ ಪ್ಯಾರಾ-ಗ್ಲೈಡಿಂಗ್ ಗೆ ಚಾಲನೆ

ಹಲವಾರು ದೇವಾಲಯಗಳು, ಸ್ಮಾರಕಗಳ ನೆಲೆಯಾಗಿರುವ ಪ್ರಸಿದ್ಧ ನಂದಿ ಬೆಟ್ಟ ಶೀಘ್ರವೇ ಪ್ಯಾರಾ ಗ್ಲೈಡಿಂಗ್ ಕೇಂದ್ರವಾಗುತ್ತಿದೆ. ಬೆಂಗಳೂರಿಗೆ ಸನಿಹದಲ್ಲಿರುವ ಗಿರಿಧಾಮವಾದ ನಂದಿ ಬೆಟ್ಟ ನಗರದ ಜನರಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಸೂಕ್ತ ಸ್ಥಳವಾಗಿದೆ.

ಬೆಂಗಳೂರು: ಹಲವಾರು ದೇವಾಲಯಗಳು, ಸ್ಮಾರಕಗಳ ನೆಲೆಯಾಗಿರುವ ಪ್ರಸಿದ್ಧ ನಂದಿ ಬೆಟ್ಟ ಶೀಘ್ರವೇ ಪ್ಯಾರಾ ಗ್ಲೈಡಿಂಗ್ ಕೇಂದ್ರವಾಗುತ್ತಿದೆ. ಬೆಂಗಳೂರಿಗೆ ಸನಿಹದಲ್ಲಿರುವ ಗಿರಿಧಾಮವಾದ ನಂದಿ ಬೆಟ್ಟ ನಗರದ ಜನರಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಸೂಕ್ತ ಸ್ಥಳವಾಗಿದೆ, ಆದರೂ ಜನರು ಬೆಟ್ಟಕ್ಕೆ ಅದರಲ್ಲಿಯೂ ವಾರಾಂತ್ಯದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕೆಲವರು ಇದನ್ನು ಸಿಲ್ಕ್ ಬೋರ್ಡ್‌ನ ಟ್ರಾಫಿಕ್ ಕಿರಿಕಿರಿಯೊಂದಿಗೆ ಹೋಲಿಸುತ್ತಾರೆ.

ಈ ಸಮಸ್ಯೆಯನ್ನು ಬಗೆಹರಿಸಲು ಪ್ರವಾಸೋದ್ಯಮ ಮತ್ತು ತೋಟಗಾರಿಕೆ ವಿಭಾಗ ಜಂಟಿಯಾಗಿ ನಂದಿ ಗಿರಿಧಾಮದಲ್ಲಿ ಪ್ಯಾರಾ-ಗ್ಲೈಡಿಂಗ್ ಸೇರಿದಂತೆ ಮನರಂಜನಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಅಲ್ಲದೆ ಅನೇಕ ಸ್ಥಳೀಯ ಪಕ್ಷಿ ಪ್ರಭೇದಗಳಿಗೆ ನೆಲೆ, ವಲಸೆ ಪಕ್ಷಿಗಳಿಗೆ ಸಹ ಸೂಕ್ತ ಸ್ಥಳವಾಗಿರುವ ನಂದಿ ಬೆಟ್ಟದ ಗಮ್ಯ ಸ್ಥಾನದಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಿ ಕೊಡುವ ಯೋಜನೆ ಇದೆ,

ಪ್ರವಾಸೋದ್ಯಮ, ತೋಟಗಾರಿಕೆ, ಪೊಲೀಸ್ ಮತ್ತು ಇತರ ಸಂಬಂಧಿತ ಸಂಸ್ಥೆಗಳು ಡಿಸೆಂಬರ್ 24 ರಿಂದ ನಂದಿ ಬೆಟ್ಟಕ್ಕೆ ಮೂರು ತಿಂಗಳ ಕಾಲ ಪ್ಯಾರಾ-ಗ್ಲೈಡಿಂಗ್ ನಡೆಸಲು ಖಾಸಗಿ ಕಂಪನಿಗೆ ಅನುಮತಿ ನೀಡಿವೆ. ಕರ್ನಾಟಕ ಅರಣ್ಯ ಇಲಾಖೆಯ ಕೆಲವು ಸಂರಕ್ಷಣಾ ತಜ್ಞರು ಮತ್ತು ಅಧಿಕಾರಿಗಳು ಇದು ವಲಸೆ ಪಕ್ಷಿಗಳ ಮೇಲೆ ರಿಣಾಮ ಬೀರಬಹುದು ಮತ್ತು ಮನುಷ್ಯ-ಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ,

"ಬಹಳ ಸಮಯದ ನಂತರ, ನಂದಿ ಬೆಟ್ಟದಲ್ಲಿ ಪ್ಯಾರಾ-ಗ್ಲೈಡಿಂಗ್ ಆಯೋಜಿಸಲಾಗುತ್ತಿದೆ. ಈ ವರ್ಷ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೂರು ಕಂಪನಿಗಳಿಗೆ ಅನುಮತಿ ನೀಡಲಾಯಿತು, ಆದರೆ ಇತರ ಏಜೆನ್ಸಿಗಳಿಂದ ಕ್ಲಿಯರೆನ್ಸ್ ಪಡೆಯಲು ವಿಳಂಬವಾದ ಕಾರಣ ಅವುಗಳಲ್ಲಿ ಯಾವುದನ್ನೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲಈ ಬಾರಿ ಮತ್ತೆ, ಅನುಮತಿ ನೀಡಲಾಗಿದೆ ಮತ್ತು ಅದು ಅಂತಿಮವಾಗಿ ಪ್ರಾರಂಬವಾಗುತ್ತದೆ ಎಂದು ಆಶಿಸುತ್ತೇವೆ" ತೋಟಗಾರಿಕೆ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದರು.

ಪ್ಯಾರಾ-ಗ್ಲೈಡಿಂಗ್ಆಯೋಜಿಸುತ್ತಿರುವ ಬೆಂಗಳೂರು ಏವಿಯೇಷನ್ ​​ಮತ್ತು ಸ್ಪೋರ್ಟ್ಸ್ ಎಂಟರ್‌ಪ್ರೈಸ್ (ಬೇಸ್) ಮಾಲೀಕ ಕುಮಾರ ಸ್ವಾಮಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆ ವಿಭಾಗದಿಂದ ಅನುಮತಿ ಸಿಕ್ಕದಿರುವುದರಿಂದ ಇದನ್ನು ಇಲ್ಲಿಯವರೆಗೆ ಆಯೋಜಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. "ಈಗ, ಡಿಜಿಸಿಎ ಮತ್ತು ಎಲ್ಲಾ ಸರ್ಕಾರಿ ಸಂಸ್ಥೆಗಳಿಂದ ಅನುಮೋದನೆ ಪಡೆಯಲಾಗಿದೆ. ತೋಟಗಾರಿಕೆ ಇಲಾಖೆಗೆ ಸೇರಿದ ಕೋಟೆ ಪ್ರದೇಶದಿಂದ ಪ್ಯಾರಾ-ಗ್ಲೈಡಿಂಗ್ ಪ್ರಾರಂಭವಾಗುತ್ತದೆ" ಎಂದು ಅವರು ಹೇಳಿದರು. 

ಈ ತಿಂಗಳ ಅಂತ್ಯದವರೆಗೆ ಮಾತ್ರ ಅನುಮತಿ ನೀಡಲಾಗಿದೆ, ಮುಂದಿನ ಮೂರು ತಿಂಗಳ ಅನುಮತಿಯನ್ನು ಭವಿಷ್ಯದ ದಿನಗಳಲ್ಲಿ ಪರಿಗಣಿಸಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT