ರಾಜ್ಯ

ಬ್ರಿಟನ್ ನಿಂದ ಬರುವ ಪ್ರಯಾಣಿಕರಿಗೆ ಕರ್ನಾಟಕದ ಮರ್ಗಸೂಚಿಗಳೇನು?: ಇಲ್ಲಿದೆ ವಿವರ!

Srinivas Rao BV

ಬೆಂಗಳೂರು: ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿ, ಬ್ರಿಟನ್ ನಿಂದ ಬರುವ ಪ್ರಯಾಣಿಕರಿಗೆ ಕೆಲವು ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. 

ಬ್ರಿಟನ್ ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರೂ ಆಗಮಿಸುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕಿದೆ, ಆರ್ ಟಿ-ಪಿಸಿಆರ್ ನೆಗೆಟೀವ್ ಬಂದರೂ 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿರಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ. 

ಬಿಎಲ್ ಆರ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ.  

  1. ರಾಜ್ಯ ಸರ್ಕಾರ ಡಿ.21, 2020 ರಂದು ಹೊರಡಿಸುವ ಸುತ್ತೋಲೆಯ ಪ್ರಕಾರ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಲಂಡನ್ ನಿಂದ ನೇರವಾಗಿ ಅಥವಾ ಲಂಡನ್ ನಿಂದ ಬೇರೆಡೆಗೆ ತೆರಳಿ ಭಾರತಕ್ಕೆ ಬರುವ ಪ್ರಯಾಣಿಕರು  ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. 
  2. ಸೋಂಕು ಪರೀಕ್ಷೆ ದೃಢಪಟ್ಟರೆ ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಐಸೊಲೇಷನ್ ಗೆ ಒಳಪಡಬೇಕಾಗುತ್ತದೆ ಹಾಗೂ ನಿಮ್ಹಾನ್ಸ್ ಗೆ ಮಾದರಿಗಳನ್ನು ಮಾಲಿಕ್ಯುಲರ್ ಟೆಸ್ಟಿಂಗ್ ಗಾಗಿ ಕಳಿಸಲಾಗುತ್ತದೆ. 
  3. ಆರ್ ಟಿಪಿಸಿಆರ್ ವರದಿ ನೆಗೆಟೀವ್ ಬಂದರೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ವಿಧಿಸಲಾಗುತ್ತದೆ.
  4. https://www.newdelhiairport.in/airsuvidha/apho-registration ನಲ್ಲಿ ಪ್ರಯಾಣದ ದಿನಾಂಕದ 72 ಗಂಟೆಗಳ ಮುನ್ನ ಸ್ವಯಂ ಘೋಷಣೆ ಫಾರ್ಮ್ ನ್ನು ತುಂಬಬೇಕು 
  5. ಹೋಮ್ ಕ್ವಾರಂಟೈನ್ ನಿಂದ ವಿನಾಯ್ತಿ ಪಡೆಯುವುದಕ್ಕೆ ವಿಮಾನ ಪ್ರಯಾಣ ಮಾಡುವುದಕ್ಕೂ 72 ಗಂಟೆಗಳ ಮುನ್ನ ನಡೆಸಿರುವ ಆರ್ ಟಿ-ಪಿಸಿಆರ್ ಪರೀಕ್ಷೆಯ ನೆಗೆಟೀವ್ ವರದಿಯನ್ನು ನೀಡಬೇಕಾಗುತ್ತದೆ. ಆದರೆ ಎಲ್ಲಾ ಪ್ರಯಾಣಿಕರೂ ಆರೋಗ್ಯದ ಬಗ್ಗೆ ಸ್ವಯಂ ನಿಗಾವಹಿಸಬೇಕಾಗುತ್ತದೆ ಹಾಗೂ ಕೋವಿಡ್-19 ಮಾದರಿಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯಬೇಕಾಗುತ್ತದೆ.
  6. ಆಪ್ತಮಿತ್ರ, ಆರೋಗ್ಯ ಸೇತು ಆಪ್ ನ್ನು ಡೌನ್ ಲೋಡ್ ಮಾಡುವುದು ಕಡ್ಡಾಯವಾಗಿದೆ. ಆನ್ ಲೈನ್ ನಲ್ಲಿ ಸ್ವಯಂ ಘೋಷಣೆ ಪತ್ರವನ್ನು ಯಾರು ತುಂಬಿರುವುದಿಲ್ಲವೋ ಅವರು ಅದನ್ನು ವಿಮಾನದಲ್ಲಿ ತುಂಬಿ ಅದರ ನಕಲನ್ನು ಆರೋಗ್ಯ ಮತ್ತು ವಲಸೆ ವಿಭಾಗದ ಅಧಿಕಾರಿಗಳಿಗೆ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ನೀಡಬೇಕಾಗುತ್ತದೆ.

 ಕರ್ನಾಟಕದಿಂದ ಬೇರೆಡೆಗೆ ಹಾಗೂ ಬೇರೆಡೆಯಿಂದ ರಾಜ್ಯಕ್ಕೆ ಮಾರ್ಗ ಬದಲಾಯಿಸುವ ಪ್ರಯಾಣಿಕರು

  1. ಕರ್ನಾಟಕಕ್ಕೆ ಆಗಮಿಸುವ ಬೇರೆ ರಾಜ್ಯಗಳ ಪ್ರಯಾಣಿಕರು ಅವರ ರಾಜ್ಯಗಳಿಗೆ ತೆರಳಿ 14 ದಿನಗಳ ವರೆಗೆ ಹೋಮ್ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ.
  2. ಬೇರೆ ರಾಜ್ಯಗಳಿಗೆ ಬಂದಿಳಿದು ನಂತರ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು, ಆಗಮಿಸಿದ ಬೆನ್ನಲ್ಲೇ 14 ದಿನಗಳ ಹೋಮ್ ಕ್ವಾರಂಟೈನ್/ ಆರ್ ಟಿ ಪಿಸಿಆರ್ ನೆಗೆಟೀವ್ ವರದಿ ಪ್ರಮಾಣ ಪತ್ರ ನೀಡುವುದು ಹಾಗೂ ಆರೋಗ್ಯದ ಮೇಲೆ ಸ್ವಯಂ ನಿಗಾ ವಹಿಸುವುದು ಕಡ್ಡಾಯವಾಗಿದೆ.
  3. ಉದ್ಯಮದ ಕಾರಣದಿಂದ ಪ್ರಯಾಣ ಮಾಡುವವರು, ಅಲ್ಪಾವಧಿಗಾಗಿ ರಾಜ್ಯದ ಭೇಟಿಗೆ ಆಗಮಿಸಿರುವ ಪ್ರಯಾಣಿಕರು ಹಾಗೂ ಕರ್ನಾಟಕದಲ್ಲಿ ಪರೀಕ್ಷೆ ಬರೆಯುವ ಪ್ರಯಾಣಿಕರು ಪ್ರಯಾಣಕ್ಕೂ 72 ಗಂಟೆಗಳ ಮುಂಚಿತವಾಗಿ ನಡೆಸಿರುವ ಆರ್ ಟಿಪಿಸಿಆರ್ ನೆಗೆಟೀವ್ ವರದಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ.
  4. ಸ್ಕ್ರೀನಿಂಗ್ ಪ್ರಕ್ರಿಯೆ: ಅಂತಾರಾಷ್ಟ್ರೀಯ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್, ಪಲ್ಸ್ ಆಕ್ಸಿಮೀಟರ್ ಪರಿಶೀಲನೆ, ಆರೋಗ್ಯ ಸೇತು ಆಪ್ ಕ್ವಾರಂಟೈನ್ ಆಪ್ ಹಾಗೂ ಆಪ್ತಮಿತ್ರ ಆಪ್ ಗಳ ರೀಡಿಂಗ್ ಪರಿಶೀಲನೆ ನಡೆಸಲಾಗುತ್ತದೆ.

ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳಿಗೂ ನಿರ್ಬಂಧವೇ?

ಡಿ.21 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಸುತ್ತೋಲೆಯ ಪ್ರಕಾರ, ಡಿ.31, 2020 ರ 23:59 ಗಂಟೆಗಳ ವರೆಗೆ ಬ್ರಿಟನ್ ನಿಂದ ಭಾರತಕ್ಕೆ, ಭಾರತದಿಂದ ಬ್ರಿಟನ್ ಗೆ ಪ್ರಯಾಣಿಸುವ ಎಲ್ಲಾ ವಿಮಾನಗಳಿಗೂ ನಿರ್ಬಂಧ ವಿಧಿಸಲಾಗಿದೆ. 

ಏರ್ ಬಬ್ಬಲ್ ಪ್ಲೈಟ್ ಅಂದರೇನು?

ಕೆಲವು ನಿರ್ಬಂಧ ಹಾಗೂ ನಿಯಂತ್ರಣಗಳೊಂದಿಗೆ ದ್ವಿಪಕ್ಷೀಯ ಒಪ್ಪಂದದ ಮೇರೆಗೆ ಉಭಯ ದೇಶಗಳ ನಡುವೆ ಸಂಚರಿಸುವ ಅಂತಾರಾಷ್ಟ್ರೀಯ ವಿಮಾನಗಳಿಗೆ ಏರ್ ಬಬ್ಬಲ್ ಫ್ಲೈಟ್ ಎನ್ನಲಾಗುತ್ತದೆ.

ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಕಡ್ಡಾಯ

ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಕೋವಿಡ್ ಸೋಂಕು ಪರೀಕ್ಷೆ ಕಡ್ಡಾಯವಾಗಿದ್ದು, ಎಲ್ಲೆ ಪ್ರಯಾಣಿಸಲಿ, ಈ ಕುರಿತ ಪ್ರಮಾಣ ಪತ್ರವನ್ನು ಹೊಂದುವುದು ಅಗತ್ಯವಾಗಿದೆ. ರಾಜ್ಯಕ್ಕೆ ಆಗಮಿಸುವ 72 ಗಂಟೆಗಳಿಗೆ ಮುನ್ನ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು.
- ಬಿ.ಎಸ್ ಯಡಿಯೂರಪ್ಪ

SCROLL FOR NEXT