ರಾಜ್ಯ

ಬೆಂಗಳೂರು: ಡ್ರಗ್ ಪೆಡ್ಲರ್ ಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಕೆ, ಆಫ್ರಿಕಾ ಮೂಲದ ವ್ಯಕ್ತಿ ಸೇರಿ ಮೂವರ ಬಂಧನ

Sumana Upadhyaya

ಬೆಂಗಳೂರು: ಮಾದಕ ವಸ್ತು ಸೇವನೆ, ಕಳ್ಳಸಾಗಣೆ, ಸಂಗ್ರಹ ಆರೋಪಗಳ ಮೇಲೆ ಕೆಲವು ಸೆಲೆಬ್ರಿಟಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ಸುದ್ದಿಯಾಗಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ನಂತರ ಸುಮ್ಮನಾಗಿತ್ತು.

ಈ ಮಧ್ಯೆ ನಟಿ ಸಂಜನಾ ಗಲ್ರಾಣಿ ಅವರು 2 ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯೂ ಆಯಿತು. ಸಿಸಿಬಿಯ ದಾಳಿ ಇಲ್ಲಿಗೇ ನಿಂತು ಹೋಗಿದೆ, ಮಾದಕ ವಸ್ತು ಅಪರಾಧ ಜಾಲದಲ್ಲಿ ತೊಡಗಿಸಿಕೊಂಡಿರುವ ಪ್ರಮುಖರನ್ನು ಇನ್ನೂ ಬಂಧಿಸಿಲ್ಲ, ಇದುವರೆಗಿನ ಕಾರ್ಯಾಚರಣೆ ನೆಪ ಮಾತ್ರ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈ ಮಧ್ಯೆ ತಮ್ಮ ಕಾರ್ಯಾಚರಣೆ ಮುಂದುವರಿದಿದೆ, ಮಾದಕ ವಸ್ತು ಕಳ್ಳಸಾಗಣೆ, ಮಾರಾಟ, ಸಂಗ್ರಹ, ಬಳಕೆ ಜಾಲವನ್ನು ಮಟ್ಟ ಹಾಕುತ್ತೇವೆ ಎಂದು ಸಿಸಿಬಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆಫ್ರಿಕಾದ ಡ್ರಗ್ ಪೆಡ್ಲರ್ ಸೇರಿದಂತೆ ಮೂರು ಮಂದಿ ಮಾದಕ ವಸ್ತು ಕಳ್ಳಸಾಗಣೆ, ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಸಾಕಷ್ಟು ಪ್ರಮಾಣದ ಡ್ರಗ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಎಸ್ ಪಾಟೀಲ್ ತಿಳಿಸಿದ್ದಾರೆ.

ಬಂಧಿತರದಲ್ಲಿ ನೈಜೀರಿಯಾ ಮೂಲದ ಪ್ರಜೆ ಕೂಡ ಸೇರಿದ್ದಾರೆ. 5 ಲಕ್ಷ ರೂಪಾಯಿ ಮೌಲ್ಯದ 10 ಗ್ರಾಂ ಎಂಡಿಎಂಎ, ಒಂದು ಕಾರು, ಒಂದು ಬೈಕ್ ಮತ್ತು ನಗದುಗಳನ್ನು ವಶಪಡಿಸಿಕೊಳ್ಳಲಾಗಿದೆ.

SCROLL FOR NEXT