ಸಂಗ್ರಹ ಚಿತ್ರ 
ರಾಜ್ಯ

ತುಮಕೂರು: ಅಪ್ರಾಪ್ತೆ ಪತ್ನಿಯನ್ನು ಕೊಂದು ಮನೆಯಲ್ಲೇ ಸಮಾಧಿ ಮಾಡಿದ ಭೂಪ!

ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಕೊಲೆ ಮಾಡಿ ಮನೆಯಲ್ಲಿಯೇ ಶವ ಹೂತು ಹಾಕಿರುವ ಘಟನೆಯೊಂದು ತುಮಕೂರಿನ ಹೊಸ ಇಟಕಲೋಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ಮಧುಗಿರಿ: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಕೊಲೆ ಮಾಡಿ ಮನೆಯಲ್ಲಿಯೇ ಶವ ಹೂತು ಹಾಕಿರುವ ಘಟನೆಯೊಂದು ತುಮಕೂರಿನ ಹೊಸ ಇಟಕಲೋಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ಗಾಯಿತ್ರಿ (16) ಮೃತಪಟ್ಟ ಬಾಲಕಿಯಾಗಿದ್ದಾಳೆ. ಘಟನೆ ಬಳಿಕ ಆರೋಪಿ ನರಸಿಂಹಮೂರ್ತಿ ತಲೆಮರೆಸಿಕೊಂಡಿದ್ದಾನೆ. 

ಗ್ರಾಮದ ಸಹೋದರ ಸಂಬಂಧಿಯಾಗಿದ್ದ ನರಸಿಂಹಯ್ಯ ತನ್ನ ಪುತ್ರ ನರಸಿಂಹಮೂರ್ತಿಗೆ ಮೃತ ಗಾಯಿತ್ರಿಯೊಡನೆ ವಿವಾಹ ಮಾಡಲು ಬಾಲಕಿಯ ತಂದೆಗೆ ಪ್ರಸ್ತಾಪ ಕಳುಹಿಸಿದ್ದರು. ಆದರೆ, ಅದನ್ನು ಬಾಲಕಿಯ ತಂದೆ ಹನುಮಂತರಾಯಪ್ಪ ನಿರಾಕರಿಸಿದ್ದನು. ಆದರೂ ಕಳೆದ ವರ್ಷ ಎಸ್ಎಸ್ಎಲ್'ಸಿ ಪರೀಕ್ಷೆ ಬರೆದ ನಂತರ ಬಲವಂತದಿಂದ ಮದುವೆ ಮಾಡಿಕೊಳ್ಳಲಾಗಿದ್ದು, ಈ ಮದುವೆಗೆ ಬಾಲಕಿಯ ಕುಟುಂಬಸ್ಥರು ಯಾರೂ ಬಂದಿರಲಿಲ್ಲ. 

ಮದುವೆಯಾಗಿ 9 ತಿಂಗಳು ಕಳೆದಿದ್ದು, ಮಕ್ಕಳ ರಕ್ಷಣಾ ಇಲಾಖೆಗೆ ಯಾರಿಂದಲೂ ಯಾವುದೇ ದೂರು ದಾಖಲಿಸಿರಲಿಲ್ಲ. 

ಪ್ರಸ್ತುತ 16 ದಿನಗಳಿಂದ ನನ್ನ ಮಗಳು ಕಾಣಿಸುತ್ತಿಲ್ಲವೆಂದು ಬಾಲಕಿಯ ತಂದೆ ಮಿಡಿಗೇಶಿ ಠಾಣೆಗೆ ದೂರು ನೀಡಿದ್ದರು. ಆದರೆ, ಯಾವುದೇ ಸುಳಿಸುವ ಸಿಕ್ಕರಲಿಲ್ಲ. ಆದರೆ, ಮೃತ ಬಾಲಕಿಯ ಅಕ್ಕ ಶ್ವೇತಾ ನರಸಿಂಹಯ್ಯನ ಮನೆಯನ್ನು ಪರಿಶೀಲನೆ ನಡೆಸುವಾದ ಮನೆಯ ಮಧ್ಯಭಾಗ ಕಂದಕ ಸೃಷ್ಟಿಸಿ ಕಡಪಾ ಕಲ್ಲಿನಿಂದ ಮುಚ್ಚಿದಂತೆ ಕಂಡು ಬಂದಿದೆ. ಕೂಡಲೇ ಅನುಮಾನಗೊಂಡ ಶ್ವೇತ ತಂದೆಗೆ ತಿಳಿಸಿ ಮತ್ತೊಮ್ಮೆ ದೂರು ನೀಡಿದ್ದರು. 

ಈ ದೂರು ಆಧರಿಸಿ ಬುಧವಾರ ಉಪ ವಿಭಾಗಾಧಿಕಾರಿ, ಸಿಡಿಪಿಒ, ಸಿಪಿಐ ನೇತೃತ್ವದಲ್ಲಿ ಮನೆಯಲ್ಲಿ ತಪಾಸಣೆ ನಡೆಸಿದಾಗ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿ ಮಧ್ಯಭಾಗದಲ್ಲಿ ಗುಂಡಿಯಲ್ಲಿ ಹುತುಹಾಕಲಾಗಿತ್ತು. ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಹಸ್ತಾಂತರಿಸಿದ್ದಾರೆ.

ಆರೋಪಿ ನರಸಿಂಹಯ್ಯ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಕೆಲ ದಿನಗಳಿಂದ ಪತ್ನಿ ಗಾಯಿತ್ರಿ ಜೊತೆಗೆ ಆಸ್ತಿ ವಿಚಾರ ಕುರಿತು ಜಗಳ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್