ಸಾಂದರ್ಭಿಕ ಚಿತ್ರ 
ರಾಜ್ಯ

ಮತಪತ್ರದಲ್ಲಿ ತಪ್ಪು ಚಿಹ್ನೆ: ಕಲಬುರಗಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಮತ ಪತ್ರದಲ್ಲಿ ಅಭ್ಯರ್ಥಿ ಚಿಹ್ನೆ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಕಮಲಾಪುರ ತಹಶೀಲ್ದಾರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಕಲಬುರಗಿ: ಮತ ಪತ್ರದಲ್ಲಿ ಅಭ್ಯರ್ಥಿ ಚಿಹ್ನೆ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಕಮಲಾಪುರ ತಹಶೀಲ್ದಾರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯ ಮತದಾನದ ವೇಳೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿನ್ನಿ ಸಡಕ್ ಗ್ರಾಮದ ವಾರ್ಡ್ ನಂಬರ್ 1ದ ಮತದಾನವನ್ನು ಮುಂದೂಡಲಾಗಿತ್ತು.

ಬುಧವಾರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಡಿಸಿ ಜ್ಯೋಥ್ಸ್ನಾ, ಅಭ್ಯರ್ಥಿ ಜಯರಾಜ್ ಹಲಗಿ ಅವರಿಗೆ ಕಹಳೆಯ ಚಿಹ್ನೆಯನ್ನು ನೀಡಲಾಗಿತ್ತು, ಆದರೆ ಬ್ಯಾಲೆಟ್ ಪೇಪರ್‌ನಲ್ಲಿ ಕಹಳೆ ಊದುತ್ತಿರುವ ವ್ಯಕ್ತಿಯ ಚಿಹ್ನೆ ಇತ್ತು ಎಂದು ಹೇಳಿದ್ದಾರೆ.

ತಮಗೆ ಹಂಚಿಕೆಯಾದ ಚುನಾವಣಾ ಗುರುತಿನಲ್ಲಿ ಬದಲಾವಣೆಯಾದದ್ದನ್ನು ಗಮನಿಸಿದ ಅಭ್ಯರ್ಥಿ ಜಯರಾಜ್ ಹಲಗೆ ಅದನ್ನು ರಿಟರ್ನಿಂಗ್ ಆಫೀಸರ್ ಗಮನಕ್ಕೆ ತಂದರು. ನಂತರ ಡಿಸೆಂಬರ್ 24 ಕ್ಕೆ ಈ ವಾರ್ಡ್ ಗೆ ಮರುಚುನಾವಣೆ ಘೋಷಿಸಲಾಗಿದೆ.

ಅದೇ ತಾಲ್ಲೂಕಿನ ಶ್ರೀಚಂದ್ ಗ್ರಾಮದ ವಾರ್ಡ್ ನಂ 2 ರಲ್ಲಿ, ಅಭ್ಯರ್ಥಿ ಗಜಾನಂದ್ ದತ್ತಪ್ರಸಾದ್ ಅವರಿಗೆ ಪೇಸ್ಟ್ ಸಂಕೇತವನ್ನು ನೀಡಲಾಗಿದ್ದರೂ, ಮತಪತ್ರದಲ್ಲಿ ಬ್ರಷ್ ಮತ್ತು ಪೇಸ್ಟ್ ಇದೆ ಎಂದು ದೂರಿದ ಕಾರಣ ಕೆಲವು ನಿಮಿಷಗಳ ಕಾಲ ಮತದಾನವನ್ನು ನಿಲ್ಲಿಸಲಾಯಿತು. ಈ ಸಂಬಂಧ ರಾಯಚೂರು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಶಿರ್ವಾರ್ ತಹಶೀಲ್ದಾರ್ ಮತ್ತು ಟಿ ತುಪ್ಪದೂರ್ ಗ್ರಾಮದ ಚುನಾವಣಾಧಿಕಾರಿಗೆ  ಶೋಕಾಸ್ ನೋಟಿಸ್ ನೀಡಿದ್ದಾರೆ.

ಅಭ್ಯರ್ಥಿ ಸಿದ್ದಮ್ಮ ಅವರಿಗೆ ಮಣ್ಣಿನ ಮಡಕೆಯ ಸಂಕೇತವನ್ನು ನೀಡಲಾಗಿತ್ತ, ಆದರೆ ಮತಪತ್ರದಲ್ಲಿ ಆಟೋ ಚಿಹ್ನೆ ಇತ್ತು. ಬೆಳಿಗ್ಗೆ 7.00 ಕ್ಕೆ ಪ್ರಾರಂಭವಾದ ಮತದಾನವನ್ನು ಸಿದ್ದಮ್ಮ ಅಧಿಕಾರಿಗಳ ಗಮನಕ್ಕೆ ತಂದ ಕೆಲವೇ ನಿಮಿಷಗಳಲ್ಲಿ ನಿಲ್ಲಿಸಲಾಯಿತು. ಎರಡು ಗಂಟೆಗಳ ನಂತರ, ಸರಿಪಡಿಸಿದ ಮತಪತ್ರದೊಂದಿಗೆ ಮತ್ತೆ ಮತದಾನಪ್ರಾರಂಭವಾಯಿತು.

ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನ ಮತ್ತು ಪ್ರಧಾನ ಅಧಿಕಾರಿಗಳಾಗಿ ನೇಮಕಗೊಂಡ 78 ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ನೀಡುವಂತೆ ರಾಯಚೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ (ಡಿಡಿಪಿಐ) ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ವೆಂಕಟೇಶ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT