ರಾಜ್ಯ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಶೀಘ್ರವೇ ವನ್ಯಜೀವಿ ಸಫಾರಿ ಆರಂಭ

Srinivas Rao BV

ಬೆಂಗಳೂರು: ಬೆಂಗಳೂರಿಗರು ವನ್ಯಜೀವಿಗಳನ್ನು ನೋಡುವುದಕ್ಕೆ ಬಂಡೀಪುರ, ನಾಗರಹೊಳೆ, ಭದ್ರ ಅಥವಾ ಬಿಆರ್ ಟಿಗೆ ಹೋಗುವ ಅಗತ್ಯವಿರುವುದಿಲ್ಲ. ಫೆಬ್ರವರಿ ತಿಂಗಳಿನಿಂದ ಕಳೆದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (ಬಿಎನ್ ಪಿ) ದಲ್ಲೇ ವನ್ಯಜೀವಿ ಸಫಾರಿಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಜಂಗಲ್ ಲಾಡ್ಜಸ್- ರೆಸಾರ್ಟ್ಸ್ (ಜೆಎಲ್ ಆರ್) ನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿರ್ಸಾ  ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿದ್ದ ಪ್ರಸ್ತಾವನೆಯನ್ನು ಅಂಗೀಕರಿಸಿದ್ದು, ಜೆಎಲ್ ಆರ್ ಪ್ರಾಯೋಗಿಕವಾಗಿ ಸಫಾರಿಯನ್ನು ಜಾರಿಗೆ ತರುತ್ತಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಚಿರತೆ, ಕರಡಿ, ಆನೆ, ಜಿಂಕೆ ಸೇರಿದಂತೆ ಹಲವು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದ್ದು, ಒಂದೇ ಒಂದು ಗಂಡು ಹುಲಿ ಇದೆ. ಉದ್ಯಾನವನದ 15 ಚದರ ಕಿಲೋಮೀಟರ್ ನಷ್ಟು ಪ್ರದೇಶವನ್ನು ಸಫಾರಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.

ದೊಡ್ಡನಕೆರೆ, ಸೋಪೇನಬೆಟ್ಟ ಟವರ್, ರಾಗಿಹಳ್ಳಿ, ಉಲ್ಲೆಸಾಲು ಗಳನ್ನು ಒಳಗೊಂಡಂಟೆ ಸಫಾರಿ ಝೂ ಪ್ರವೇಶ ಕಲ್ಪಿಸಿ ಜೆಎಲ್ಆರ್ ಗೇಟ್ ಗೆ ಡೀವಿಯೇಟ್ ಮಾಡುವುದಕ್ಕೆ ನಿರ್ಧರಿಸಲಾಗಿದೆ.

ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ಒಂದು ವಾಹನವನ್ನಷ್ಟೇ ಬಳಕೆ ಮಾಡಲು ಅನುಮತಿ ನೀಡಾಲಾಗುತ್ತದೆ, ಟ್ರೆಕ್ಕಿಂಗ್ ಗೆ ಅವಕಾಶವಿಲ್ಲ ಎಂದು ಮಿಶ್ರಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಟ್ರಯಲ್ ಗಳು ಪ್ರಾರಂಭವಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಸಫಾರಿ ಪ್ರಾರಂಭವಾಗಲಿದೆ ಎಂದು ಉಪ ಅರಣ್ಯ ರಕ್ಷಣಾಧಿಕಾರಿ ಬಿಎನ್ಎನ್ ಮೂರ್ತಿ ತಿಳಿಸಿದ್ದಾರೆ.

SCROLL FOR NEXT