ರಾಜ್ಯ

ಬಾಲಿವುಡ್ ಹಿರಿಯ ಛಾಯಾಗ್ರಾಹಕ ಈಶ್ವರ ಬಿದ್ರಿ ವಿಧಿವಶ

Shilpa D

ಬೆಳಗಾವಿ: ಬಾಲಿವುಡ್‌ ಛಾಯಾಗ್ರಾಹಕರಾಗಿ 1990ರ ದಶಕದಲ್ಲಿ ದೊಡ್ಡ ಹೆಸರು ಮಾಡಿದ್ದ ಕನ್ನಡಿಗ ಈಶ್ವರ ಬಿದ್ರಿ (87) ಅನಾರೋಗ್ಯದಿಂದ ಭಾನುವಾರ ಬೆಳಗಾವಿಯಲ್ಲಿ ನಿಧನರಾದರು. 

ಅವರಿಗೆ ಪತ್ನಿ, ಪುತ್ರ ಇದ್ದಾರೆ, ವಿಜಯಪುರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.ಬೆಂಗಳೂರಿನ ಎಸ್‌.ಜೆ. ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೊಗ್ರಫಿ ಕಲಿತ ಅವರು, ಮುಂಬೈನಲ್ಲಿ ಕನ್ನಡಿಗರೇ ಆದ ವಿ.ಕೆ. ಮೂರ್ತಿ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. 

ಡಿಸೆಂಬರ್ 20 ರಂದು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಈಶ್ವರ್ ಬಿದ್ರಿ ಅವರಿಗೆ ಹೃದಯಾಘಾತವಾಗಿತ್ತು, ಕೂಡಲೇ ಅವರನ್ನು ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಮತ್ತೆ ಹೃದಯಾಘಾತವಾದ್ದರಿಂದ ಭಾನುವಾರ ರಾತ್ರಿ 9.50 ಕ್ಕೆ ಇಹ ಲೋಕ ತ್ಯಜಿಸಿದ್ದಾರೆ ಎಂದು ಈಶ್ವರ ಅವರ ಪುತ್ರ ಸಂಜೀವ್ ಬಿದ್ರಿ ತಿಳಿಸಿದ್ದಾರೆ.

ವಿ.ಕೆ. ಮೂರ್ತಿ ಛಾಯಾಗ್ರಹಣ ಮಾಡಿರುವ ‘ಪ್ಯಾಸಾ’, ‘ಕಾಗಝ್‌ ಕೆ ಫೂಲ್‌’ ಸೇರಿದಂತೆ ಹಲವು  ಹಿಂದಿ ಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು. ‘ಬಾರ್ಡರ್‌’, ‘ಘಾತಕ್‌’, ‘ಅಂದಾಜ್‌’, ‘ಢಾಯಿ ಅಕ್ಷರ್ ಪ್ರೇಮ್‌ ಕೆ’, ‘ಅಂದಾಜ್‌ ಅಪ್ನಾ ಅಪ್ನಾ’, ‘ದಾಮಿನಿ’, ‘ಬಟ್ವಾರಾ’, ‘ಗುಲಾಮಿ’, ‘ಹತ್ಯಾರ್‌’, ‘ಯತೀಮ್‌’ ಸೇರಿದಂತೆ ಹಲವು ಹಿಂದಿ
ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.

SCROLL FOR NEXT