ರಾಜ್ಯ

ನೈಸ್ ರಸ್ತೆಯಲ್ಲಿ ಕಳ್ಳತನ ವದಂತಿ: ದೂರು ನೀಡಿದ ಅಶೋಕ್ ಖೇಣಿ

Srinivasamurthy VN

ಬೆಂಗಳೂರು: ನೈಸ್ ರಸ್ತೆಯಲ್ಲಿ ಕಳ್ಳತನ ನಡೆಯಲಿದೆ ಎನ್ನುವ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋ ಬಗ್ಗೆ ಮಾಜಿ ಶಾಸಕ ಅಶೋಕ್ ಖೇಣಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು‌ ಹರಿಬಿಟ್ಟಿರುವ ವಿಡಿಯೋ ,ಆಡಿಯೋದಲ್ಲಿ ಕಲ್ಲು ಎಸೆಯುತ್ತಾರೆ, ನೈಸ್ ರಸ್ತೆ ಬಳಿ ಕಾದು ಕಳಿತು ಕಲ್ಲು ಎಸೆದು ಗಮನ ಬೇರೆಡೆ ಸೆಳೆದು (ಡೈವರ್ಟ್) ಮಾಡುತ್ತಾರೆ. ಕಾರು ನಿಲ್ಲಿಸಿದ ತಕ್ಷಣ ತಮ್ಮ ವರಸೆಯನ್ನು ಕಳ್ಳರು ತೋರಿಸುತ್ತಾರೆ ಎನ್ನುವ ಸಂದೇಶ ಹರಿಬಿಡಲಾಗಿದೆ.

ಆದರೆ, ನೈಸ್ ರಸ್ತೆಯಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ಇದುವರೆಗೂ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ, ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ. ಕಂಪನಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ  ತೆಗೆದುಕೊಳ್ಳುವಂತೆ ಸೈಬರ್ ಪೊಲೀಸರಿಗೆ ಖೇಣಿ‌ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ವಿಡಿಯೋ
ಇನ್ನು ನೈಸ್ ರಸ್ತೆಯಲ್ಲಿ ಕಳ್ಳತನ ಮತ್ತು ದರೋಡೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡಿತ್ತು. ಮಾರಕಾಸ್ತ್ರಗಳನ್ನು ಹಿಡಿದಿದ್ದ ಯುವಕರ ತಂಡ ಕಾರೊಂದನ್ನು ಅಡ್ಡಗಟ್ಟಿ ದೋಚಲು ಮುಂದಾಗಿದ್ದರು. ಆದರೆ ಕಾರು ಚಾಲಕ ಕೂಡಲೇ ಎಚ್ಚೆತ್ತು ಕಾರನ್ನು ರಿವರ್ಸ್ ಗೇರ್ ನಲ್ಲಿ  ವೇಗವಾಗಿ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದ. ಕಾರನ್ನು ಅಟ್ಟಾಡಿಸಿದ್ದ ದುಷ್ಕರ್ಮಿಗಳು ಕಾರಿನ ಮೇಲೆ ದೊಣ್ಣೆಗಳನ್ನು ಎಸೆದಿದ್ದರು. 25 ಸೆಕೆಂಡ್ ಗಳ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
 

SCROLL FOR NEXT