ರಾಜ್ಯ

ಚೀನಾ ಸಾಲ ಆಪ್ ಗಳಿಂದ ಅಂಕಿಅಂಶ ಕಳವು ಆರೋಪ: ಜಾಗೃತ ದಳಗಳಿಂದ ತನಿಖೆ ಆರಂಭ 

Sumana Upadhyaya

ಬೆಂಗಳೂರು: ತಕ್ಷಣ ಸಾಲ ಪಡೆಯುವ ಆಪ್ ನ ಹಗರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಚೀನಾ ಪ್ರಜೆಗಳಿಗೆ ಜಾಗೃತ ದಳ ಹುಡುಕಾಟ ಆರಂಭಿಸಿದೆ. ಈ ಹಗರಣದಿಂದ ಹಲವರು ಆತ್ಮಹತ್ಯೆ ಮಾಡಿಕೊಂಡು ಇನ್ನು ಕೆಲವರ ಅಂಕಿಅಂಶ ಕಳವು ಆದ ಪ್ರಸಂಗ ನಡೆದಿದೆ.

ಆಪ್ ಗಳು ಚೀನಾ ಮೂಲದವಾಗಿದ್ದು, ಸಾಲ ಕೊಡಿಸುವ ನೆಪದಲ್ಲಿ ಚೀನೀಯರೆ ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ, ಈ ಮೂಲಕ ಭಾರತದಿಂದ ಅಂಕಿಅಂಶಗಳನ್ನು ಕದಿಯುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶೋಧ ಮತ್ತು ವಿಶ್ಲೇಷಣಾ ವಿಭಾಗ ಹಾಗೂ ಜಾಗೃತ ದಳ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದು ಮೂಲದಿಂದಲೇ ಅರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ ಎಂದು ಮೂಲಗಳು ಹೇಳುತ್ತವೆ.

ಜಾಗೃತ ದಳ ಬೆಂಗಳೂರು, ತೆಲಂಗಾಣ, ಪುಣೆ, ಗುರುಗ್ರಾಮ್ ಮತ್ತು ಎನ್ ಸಿಆರ್ ಗಳಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮತ್ತು ತಡೆ ಕಾಯ್ದೆ(ಪಿಎಂಎಲ್ ಎ) ಅಡಿ ತನಿಖೆ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ. ಕರ್ನಾಟಕದಲ್ಲಿ ಸಾಲದ ಆಪ್ ಗಳ ವಂಚನೆ ಕೇಸನ್ನು ಅಪರಾಧ ತನಿಖೆ ಇಲಾಖೆ ತನಿಖೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಬೊರಯನ್ಸ್ಕಿ ಟೆಕ್ನಾಲಜಿಸ್ ನ ಇಬ್ಬರನ್ನು ಬಂಧಿಸಲಾಗಿದೆ. ಈ ದಾಳಿಗೆ ಒಳಪಟ್ಟಿರುವ ಕಂಪೆನಿಗಳನ್ನು ಚೀನೀಯರು ನಿಯಂತ್ರಿಸುತ್ತಿದ್ದಾರೆ ಎಂದು ನಗರ ಅಪರಾಧ ದಳದ ಪೊಲೀಸ್ ಸೂಪರಿಂಟೆಂಡೆಂಟ್ ಎಂ ಡಿ ಶರತ್ ತಿಳಿಸಿದ್ದಾರೆ.

ಸಿಐಡಿ, ಮ್ಯಾಡ್ ಎಲಿಫೆಂಟ್ ಟೆಕ್ನಾಲಜಿಸ್ ಪ್ರೈ ಲಿ, ಬೊರಯನ್ಸ್ಕಿ ಟೆಕ್ನಾಲಜಿಸ್ ಪ್ರೈ ಲಿಮಿಟೆಡ್, ಪ್ರೊಫಿಟೈಸ್ ಪ್ರೈ ಲಿಮಿಟೆಡ್, ವಿಝ್ ಪ್ರೊ ಸೊಲ್ಯೂಷನ್ಸ್ ಪ್ರೈ ಲಿಮಿಟೆಡ್ ಮೇಲೆ ದಾಳಿ ನಡೆಸಿದೆ. ತೆಗೆದುಕೊಂಡ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವ ಮೂಲಕ ತಮಗೆ ಕಂಪೆನಿಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರುಗಳು ಬಂದ ಆಧಾರದ ಮೇಲೆ ಈ ದಾಳಿ ಮಾಡಿದೆ. ಈ ವೇಳೆ ಅಪಾರ ಪ್ರಮಾಣದ ನಕಲಿ ಸಿಮ್ ಕಾರ್ಡುಗಳು, ನಕಲಿ ಬ್ಯಾಂಕ್ ಖಾತೆಗಳು, ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಶರತ್ ತಿಳಿಸಿದ್ದಾರೆ.

SCROLL FOR NEXT