ರಾಜ್ಯ

ಗ್ರಾಮ ಪಂಚಾಯಿತಿ ಮತ ಎಣಿಕೆಯ ಇಬ್ಬರು ಏಜೆಂಟ್ ಗಳು ಅಪಘಾತದಲ್ಲಿ ಸಾವು

Shilpa D

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಸಂಭವಿಸಿದೆ. 

ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿಗಳಾದ ಪ್ರಕಾಶ ಬನ್ನಿಮಟ್ಟಿ (40), ಸಿದ್ದನಗೌಡ ಬಿಷ್ಟನಗೌಡರ (45) ಮೃತ ದುರ್ದೈವಿಗಳು. ಇಂದು ಗ್ರಾಮ ಪಂಚಾಯತಿ ಮತ ಎಣಿಕೆ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಪರವಾಗಿ ಮತ ಎಣಿಕೆಯ ಏಜೆಂಟ್ ಆಗಿದ್ದ ಇಬ್ಬರು ಹಾವೇರಿಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಹಾವೇರಿಯಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯೆ ಮತ ಎಣಿಕೆ ಹಿನ್ನೆಲೆಯಲ್ಲಿ ಹಾವೇರಿಗೆ ಬರುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಇಬ್ಬರು ಅಭ್ಯರ್ಥಿಯ ಪರವಾಗಿ ಮತ ಎಣಿಕೆಯ ಏಜೆಂಟ್ ಆಗಿದ್ದರು ಎನ್ನಲಾಗಿದೆ.

ನಿಯಂತ್ರಣ ತಪ್ಪಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಕಾರು ಉರುಳಿ ಬಿದ್ದಿದ್ದರಿಂದ ದುರ್ಘಟನೆ‌ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

SCROLL FOR NEXT