ರಾಜ್ಯ

ಟಿಎಂ ವಿಜಯಭಾಸ್ಕರ್ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದರು: ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ಜುಲೈ 1 2018 ರಂದು ಅಧಿಕಾರವಹಿಸಿಕೊಂಡಿದ್ದ ಟಿ.ಎಂ.ವಿಜಯ್​ ಭಾಸ್ಕರ್​ರಾವ್​ ಇದೇ ತಿಂಗಳ 31 ನೇ ತಾರೀಖು ನಿವೃತ್ತರಾಗುತ್ತಿದ್ದಾರೆ. 

ಈ ಹಿಂದೆ ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ವಿಜಯಭಾಸ್ಕರ್​​ ರವರ ಕೊನೆಯ ಸಂಪುಟ ಸಭೆಯಾಗಿದೆ. ಈ ಹಿನ್ನೆಲೆ ಸಿಎಂ ಮತ್ತು ಎಲ್ಲಾ ಸಂಪುಟ ಸಹೋದ್ಯೋಗಿಗಳ ಸೇರಿ ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ.

57ರ ಹರೆಯದ ಕನ್ನಡಿಗ ಅಧಿಕಾರಿ ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. 1983ರ ಬ್ಯಾಚ್‌ನ ಅಧಿಕಾರಿಯಾದ ಅವರು ಕೊಪ್ಪಳ ಉಪವಿಭಾಗಾಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು. 

ವಿಜಯಪುರ, ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ, ಅರಣ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಜಲಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ವರ್ಕೋಹೋಲಿಕ್ ಎಂದೇ ಹೆಸರು ಗಳಿಸಿರುವ ವಿಜಯ್ ಭಾಸಕರ್ ಅವರು, ಇದೂವರೆಗೂ ತಮ್ಮ ಮಗಳ ಮದುವೆಗಾಗಿ ಮಾತ್ರ 2 ದಿನಗಳ ಕಾಲ ಸಾಮಾನ್ಯ ರಜೆಯನ್ನು ತೆಗೆದುಕೊಂಡಿದ್ದು ಬಿಟ್ಟರೆ ಬೇರಾವುದೇ ಕಾರಣಕ್ಕೂ ರಜೆಗಳನ್ನು ತೆಗೆದುಕೊಂಡಿಲ್ಲ ಎಂದು ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದಾಗ ವಿಜಯ್ ಭಾಸ್ಕರ್ ಅವರು ಅತ್ಯುತ್ತಮವಾಗಿ ನಿಭಾಯಿಸಿದ್ದರು. ಸಮರ್ಥ, ದಕ್ಷ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಲಾಕ್ ಡೌನ್ ಸಮಯದಲ್ಲಿ ಅಗತ್ಯ ಸೇವೆಗಳ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಾಕಷ್ಟು ಪರಿಶ್ರಮದಿಂದ ಕೆಲಸ ಮಾಡಿದ್ದರು. ಇ-ಆಡಳಿತಕ್ಕಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ, ಲಾಕ್ ಡೌನ್ ಸಮಯದಲ್ಲಿ ಇಂತಹ ನಿರ್ಧಾರಗಳು ಉತ್ತಮವಾಗಿತ್ತು ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯನ್ನು ಉತ್ತಮ ಹಾದಿಗೆ ತರಲು ವಿಜಯ್ ಭಾಸ್ಕರ್ ಅವರು ಸಾಕಷ್ಟು ಶ್ರಮಿಸಿದ್ದಾರೆ. ವಿಜಯ್ ಭಾಸ್ಕರ್ ಅವರು ಶ್ರಮ ಪಡದೇ ಹೋಗಿದ್ದರೆ, ಯೋಜನೆ 2 ವರ್ಷ ವಿಳಂಬವಾಗುವ ಸಾಧ್ಯತೆಗಳಿರುತ್ತಿತ್ತು. ಯೋಜನೆ ಕಾರ್ಯ ಪ್ರಗತಿ ಸಾಧಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ನಿಯಮಿತವಾಗಿ ಸಭೆ ನಡೆಸುತ್ತಿದ್ದರು. ನೋಡಲು ಸರಳ ಮನುಷ್ಯನಂತೆ ತೋರಿದರೂ ಅತ್ಯಂತ ಶ್ರಮದಾಯಿ ವ್ಯಕ್ತಿಯಾಗಿದ್ದರು. ರಾಜ್ಯಕ್ಕೆ ವಿಜಯ್ ಭಾಸ್ಕರ್ ಸಂಪತ್ತು ಎಂದು  ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ತಿಳಿಸಿದ್ದಾರೆ. 

SCROLL FOR NEXT