ಹೊಸಪೇಟೆ: ಬೆಲೆಗೆ ಸರಿಯಾಗಿ ಪೆಟ್ರೋಲ್ ಹಾಕದೇ ವಂಚಿಸುತ್ತಿದ್ದ ಪೆಟ್ರೋಲ್ ಪಂಪ್ ಮಾಲಿಕನ ವಿರುದ್ಧ ದೂರು 
ರಾಜ್ಯ

ಹೊಸಪೇಟೆ: ಬೆಲೆಗೆ ಸರಿಯಾಗಿ ಪೆಟ್ರೋಲ್ ಹಾಕದೇ ವಂಚಿಸುತ್ತಿದ್ದ ಪೆಟ್ರೋಲ್ ಪಂಪ್ ಮಾಲಿಕನ ವಿರುದ್ಧ ದೂರು 

ಬೆಲೆಗೆ ಸರಿಯಾದ ಪೆಟ್ರೋಲ್ ಹಾಕದೆ ವಂಚಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಹಕರು ಬಂಕ್ ಮಾಲೀಕರು ಮತ್ತು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿ ನಡೆಯಿತು.

ಹೊಸಪೇಟೆ: ಬೆಲೆಗೆ ಸರಿಯಾದ ಪೆಟ್ರೋಲ್ ಹಾಕದೆ ವಂಚಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಹಕರು ಬಂಕ್ ಮಾಲೀಕರು ಮತ್ತು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿ ನಡೆಯಿತು.

ನಗರದ ಶಂಕರ್ ಪೆಟ್ರೋಲ್ ಸರ್ವೀಸ್ ಸೆಂಟರ್ ನಲ್ಲಿ ಪಾಟ್ರೋಲ್ ಹಾಕಿಸಿಕೊಳ್ಳಲು ಬಂದ ಗ್ರಾಹಕನಿಂದ 100 ರೂಪಾಯಿ ಪಡೆದ ಸಿಬ್ಬಂದಿ 68 ರೂಪಾಯಿ ಪೆಟ್ರೋಲ್ ಹಾಕಿ ವಂಚಿಸಲು ನೋಡಿದ್ದಾನೆ. ಇದನ್ನ ಗಮನಿಸಿದ ಗ್ರಾಹಕ ಕೂಡಲೇ ಬಂಕ್ ಮಾಲಿಕ ಮತ್ತು ಮ್ಯಾನೇಜರ್ ಗಮನಕ್ಕೆ ತಂದರೂ ತಲೆ ಕೆಡಿಸಿಕೊಳ್ಳದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಹಕರು ಕೆಲವು ನಿಮಿಷ ಪೆಟ್ರೋಲ್ ಪಂಪ್ ಬಂದ್ ಮಾಡಿ ಗಲಾಟೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿಕೊಟ್ಟ ಹೊಸಪೇಟೆ ಪಟ್ಟಣ ಪೊಲೀಸರು ಗಲಾಟೆ ನಿಯಂತ್ರಿಸಿ ಠಾಣೆಗೆ ಬಂದು ಮಾಲೀಕರ ವಿರುದ್ಧ ದೂರು ನೀಡುವಂತೆ ತಿಳಿಸಿದರು. ನಂತರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಂಚಿತ ಗ್ರಾಹಕರು ಬಂಕ್ ಮಾಲೀಕ ಮತ್ತು ಸಿಬ್ಬಂದಿಗಳ ವಿರುದ್ಧ ದೂರು ನೀಡಲು ಮುಂದಾದರು. 

ಕಳೆದ ಕೆಲವು ತಿಂಗಳಿನಿಂದ ಈ ಶಂಕರ್ ಸರ್ವೀಸ್ ಸೆಂಟರ್ ನಲ್ಲಿ ಕಳಪೆ ಗುಣ ಮಟ್ಟ ಮತ್ತು ಅಳೆಯತೆಯ ಪೆಟ್ರೋಲ್ ಹಾಕಿ ಗ್ರಾಹರನ್ನ ವಂಚಿಸಲಾಗುತ್ತೆ ಎಂದು ಆರೋಪ ಕೇಳಿ ಬರುತಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ, ಲೆಬನಾನ್ ಕದನ ವಿರಾಮ, ಆಸ್ತಿ ಬಿಡುಗಡೆ ಪ್ರಮುಖ ಅಜೆಂಡಾ-Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

PSL ನಲ್ಲಿ ಮತ್ತೊಂದು ಹೈಡ್ರಾಮಾ: ಇದ್ಯಾವ್ ಸೀಮೆ ಬೌಲಿಂಗ್?.. ಮೈದಾನದಲ್ಲೇ Daryl Mitchell vs Usman Tariq ಜಟಾಪಟಿ, ಇಷ್ಟಕ್ಕೂ ಆಗಿದ್ದೇನು?

SCROLL FOR NEXT