ರಾಜ್ಯ

ರಾಜ್ಯದಲ್ಲಿ ಕೊರೊನಾ ಭೀತಿ: 28 ನೆಗೆಟಿವ್, 54 ಮಂದಿಯ ವರದಿ ನಿರೀಕ್ಷೆಯಲ್ಲಿದೆ ಎಂದ ಆರ್‌ಜಿಐಸಿಡಿ

Raghavendra Adiga

ಬೆಂಗಳೂರು: ಭಾನುವಾರದೊರಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೊರೊನಾವೈರಸ್‌ನಿಂದಾಗಿ ಶಂಕೆಇತರಾದವರ ಸಂಖ್ಯೆ 82ಕ್ಕೆ ತಲುಪಿದೆ. ಇದರಲ್ಲಿ 28 ಋಣಾತ್ಮಕ (ನೆಗೆಟಿವ್) ಎಂದು ವರದಿ ಬಂದಿದ್ದು ಉಳಿದ 54  ಶಂಕಿತ ರೋಗಿಗಳ  ಪರೀಕ್ಷಾ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. 

ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆಕಂಡುಬಂದ ಕೊರೊನಾವೈರಸ್‌ ಇದೀಗ ಭಾರತಕ್ಕೆ ಸಹ ಕಾಲಿರಿಸಿದ್ದು ಕೇರಳದಲ್ಲಿ ಇದುವರೆಗೆ ಎರಡು ಪ್ರಕರಣಗಳು ದಾಖಲಾಗಿದೆ.

"82 ಮಾದರಿಗಳ ಪೈಕಿ ಇಪ್ಪತ್ತೆಂಟರ ಫಲಿತಾಂಶ ಬಂದಿದ್ದು ಎಲ್ಲವೂ ನಕಾರಾತ್ಮಕವಾಗಿದೆ (ನೆಗೆಟಿವ್) ಎಂದು ಸ್ಪಷ್ಟವಾಗಿದೆ. ಉಳಿದ ಫಲಿತಾಂಶಗಳಿಗಾಗಿ ನಿರೀಕ್ಷಿಸಲಾಗುತ್ತಿದೆನಮ್ಮ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾದ 13 ಗಳೂ ಈ ನಿರೀಕ್ಷಣಾ ಪಟ್ಟಿಯಲ್ಲಿದ್ದಾರೆ ಇದಲ್ಲದೆ ಇನ್ಫ್ಲುಯೆಂಜಾದಂತಹಾ ರೋಗಲಕ್ಷಣ ಳೊಂದಿಗೆ ಒಂಬತ್ತು ಹೊಸ ರೋಗಿಗಳು ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅವರಿಗೆ ಸಹ ಥ್ರೋಟ್ ಸ್ವಾಬ್ ಮಾಡಿಸಲಾಗಿದೆ"ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ (ಆರ್ಜಿಐಸಿಡಿ) ನಿರ್ದೇಶಕ ಸಿ ನಾಗರಾಜ್ ಹೇಳಿದ್ದಾರೆ.

"ನಮ್ಮ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇನ್ನೂ ಎರಡು ಪರೀಕ್ಷಾ ಪ್ರಯೋಗಾಲಯಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಎಂಟು ಗಂಟೆಗಳಲ್ಲಿ ನಾವು ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ಶನಿವಾರದವರೆಗೆ,ಕೊರೊನಾವೈರಸ್‌ ಪೀಡಿತ ದೇಶಗಳ 37 ಪ್ರಯಾಣಿಕರನ್ನು ಗುರುತಿಸಲಾಗಿದೆ ಮತ್ತು ಅವರನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ; ಅವರಲ್ಲಿ 33 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.ನಾಲ್ಕು ಪ್ರಯಾಣಿಕರು ದೇಶವನ್ನು ತೊರೆದಿದ್ದಾರೆ ಮತ್ತು ಯಾರನ್ನೂ ಪ್ರತ್ಯೇಕ ವಾರ್ಡ್‌ಗಳಲ್ಲಿ ಸೇರಿಸಲಾಗಿಲ್ಲ "ಆರೋಗ್ಯ ಸಹಾಯವಾಣಿ  ಕರೆ ಸ್ವೀಕರಿಸುವಿಕೆ ಮತ್ತು ಪರಿಹಾರಕ್ಕಾಗಿ ಎರಡು ಸೀಟುಗಳನ್ನು ಕಾಯ್ದಿರಿಸಲಾಗಿದೆ. ಕೊರೊನಾವೈರಸ್‌  ಪೀಡಿತ ದೇಶಗಳಿಂದ ಆಗಮಿಸಿದವರು ರೋಗಲಕ್ಷಣಗಳನ್ನು ಹೊಂದಿರಲಿ ಅಥವಾ ಇಲ್ಲದಿರಲಿ, ಆಗಮನದ ದಿನಾಂಕದಿಂದ 28 ದಿನಗಳವರೆಗೆ ಕಟ್ಟುನಿಟ್ಟಾದ ಹೋಂ ಐಸೋಲೇಷನ್ ನಲ್ಲಿ ಇರಿಸಲಾಗುತ್ತಿದೆ.”ಎಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸೀನುವಾಗ ಅಥವಾ ಕೆಮ್ಮು ಬಂದ ನಂತರ ಆಗಾಗಾ ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳಿ. ಆದಷ್ಟು ಮೂರು ಹಾಗೂ ಭಾಯಿಗಳನ್ನು ಮಸ್ಕ್ ಬಳಸಿ ಮುಚ್ಚಿಕೊಳ್ಳಿ ಎಂದು ಆರೋಗ್ಯ ಇಲಾಖೆ ನಾಗರಿಕರಿಗೆ ಸೂಚಿಸಿದೆ.

"ಸಾಮಾನ್ಯ ಲಕ್ಷಣಗಳು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ. ಶೀತ ಅಥವಾ ಜ್ವರ ತರಹದ ರೋಗಲಕ್ಷಣಗಳಿದ್ದರೆ ಅಂತಹವರೊಡನೆ ನಿಕಟ ಸಂಪರ್ಕವನ್ನು ತಪ್ಪಿಸಿ ಮತ್ತು ಯಾವುದೇ ವ್ಯಕ್ತಿಯಿಂದ ಕನಿಷ್ಠ ಒಂದು ಮೀಟರ್ ದೂರವನ್ನು ಕಾಪಾಡಿಕೊಳ್ಳಿ. ನೀವು ಇತ್ತೀಚೆಗೆ ಚೀನಾಕ್ಕೆ ಪ್ರಯಾಣಿಸಿದರೆ (ಕಳೆದ 14 ದಿನಗಳಲ್ಲಿ) ಅಥವಾ ಕೊರೊನಾವೈರಸ್‌ ಪೀಡಿತ ವ್ಯಕ್ತಿಯೊಂದಿಗೆ ಸಂಭಾವ್ಯ ಸಂಪರ್ಕವನ್ನು ಹೊಂದಿದ್ದರೆ, ನೀವು ಹಿಂದಿರುಗಿದ ನಂತರ 14 ದಿನಗಳವರೆಗೆ ಹೋಂ ಐಸೋಲೇಷನ್ ನಲ್ಲಿರಲು ಸೂಚಿಸಲಾಗುತ್ತದೆ.ತ್ಯೇಕ ಕೋಣೆಯಲ್ಲಿ ಮಲಗಿಕೊಳ್ಳಿ, ಜನರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ, ಮಾಸ್ಕ್ ಧರಿಸಿ ಮತ್ತು ಹತ್ತಿರದ ಆಸ್ಪತ್ರೆಗೆ ವರದಿ ನೀಡಿರಿ ”ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT